


ಉಜಿರೆ: ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ನೇತೃತ್ವದಲ್ಲಿ ಶ್ರೀ ಸದಾಶಿವ ದೇವಸ್ಥಾನದ ವಠಾರದಲ್ಲಿ ನಡೆಯುವ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸೆ.1ರಂದು ನಡೆಯಿತು. ಓಡಲ ಬಿ.ವಾಸುದೇವ ಭಟ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಕೃಷ್ಣ ಮೂರ್ತಿ ಹೊಳ್ಳ, ಸುಬ್ರಹ್ಮಣ್ಯ ಹೊಳ್ಳ ದಾವಣಗೆರೆ, ರವಿ ಕಾರಂತ ಕಕ್ಕರಬೆಟ್ಟು, ಧರ್ಣಪ್ಪ ಗೌಡ ಧರಣಿ, ಕೊರಗಪ್ಪ ಗೌಡ, ಭಜನಾ ಮಂಡಳಿಯ ಅಧ್ಯಕ್ಷ ವಿಠಲ ನಾಯ್ಕ, ಕಾರ್ಯದರ್ಶಿ ಗಿರೀಶ್ ಹಾಗೂ ಭಜನಾ ಪದಾಧಿಕಾರಿಗಳು, ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.ಬಳಿಕ ವಿವಿಧ ಆಟೋಟ ಸ್ಪರ್ಧೆ, ಮಲ್ಲಕಂಬ ಸ್ಪರ್ಧೆ ನಡೆಯಿತು.
ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆಯವರೆಗೂ ಆಟೋಟ ಸ್ಪರ್ಧೆಗಳು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.