


ಉಜಿರೆ: ಉಜಿರೆ ಹಳ್ಳಿ ಮನೆ ಪ್ರವೀಣ್ ಫೆರ್ನಾಂಡಿಸ್ ರವರ ತಂದೆ ಫ್ರಾನ್ಸಿಸ್ ಫೆರ್ನಾಂಡಿಸ್ (73ವ) ಆ.30ರಂದು ನಿಧನರಾದರು..
ಮೃತರು ಸುಮಾರು 35 ವರ್ಷಗಳ ಕಾಲ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರಿಗೆ ಅಪಘಾತ ರಹಿತ ಚಾಲಕ ಪ್ರಶಸ್ತಿ ಪುರಸ್ಕೃತ ಪ್ರಶಸ್ತಿ ಪುರಸ್ಕಾರ ಕೂಡ ಲಭಿಸಿತ್ತು. ಇವರು ನಿವೃತ್ತ ಬಳಿಕವು ಕೆ ಎಸ್ ಆರ್ ಟಿ ಸಿ ಚಾಲಕರಿಗೆ ತರಬೇತಿ ಕೂಡ ನೀಡುತ್ತಿದ್ದರು.


ಇವರು ಉಜಿರೆ ಸಂತ ಅಂತೋನಿ ಚರ್ಚ್ ನ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ, ನಿತ್ಯಾಧರ್ ವಾಳೆಯ ಗುರಿಕಾರರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.
ಇವರು ಪತ್ನಿ ಉಜಿರೆ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಎಮಿಲ್ಡಾ ಫೆರ್ನಾಂಡಿಸ್, ಪುತ್ರರಾದ ಉಜಿರೆ ಹಳ್ಳಿ ಮನೆ ಪ್ರವೀಣ್ ಫೆರ್ನಾಂಡಿಸ್, ಪ್ರಶಾಂತ್ ಫೆರ್ನಾಂಡಿಸ್, ಉಜಿರೆ ಎಸ್ ಎ ಮೆಡಿಕಲ್ ಮಾಲಕ ಪ್ರಕಾಶ್ ಫೆರ್ನಾಂಡಿಸ್ ರವರನ್ನು ಅಗಲಿದ್ದಾರೆ.









