ವೇಣೂರು: ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ 17ರ ವಯೋಮಾನದ ಬಾಲಕ ಮತ್ತು ಬಾಲಕಿಯರ ಖೋ ಖೋ ಪಂದ್ಯಾಟ ಸೆ. 9ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಕೆ. ಹೆಗ್ಡೆ ವಹಿಸಿದ್ದರು. ಉದ್ಘಾಟನೆಯನ್ನು ಎಸ್. ಡಿ. ಎಂ. ಸಿ ಉಪಾಧ್ಯಕ್ಷ ರಾಜೇಶ್ ಪೂಜಾರಿ ಮೂಡುಕೋಡಿ ನೆರವೇರಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭಾಸ್ಕರ್ ಪೈ, ವೇಣೂರು ಸಹಕಾರ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ರೋಟರಿ ಕ್ಲಬ್ ಸಿದ್ದಕಟ್ಟೆ ಅಧ್ಯಕ್ಷ ರೊ. ದುರ್ಗಾದಸ್ ಶೆಟ್ಟಿ, ಲಯನ್ಸ್ ಕ್ಲಬ್ ವೇಣೂರು ಅಧ್ಯಕ್ಷ ಲ. ಸುದೀರ್ ಭಂಡಾರಿ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ, ಗಣೇಶ್ ನಾರಾಯಣ ಪಂಡಿತ್ ಮೂಡು ಕೋಡಿ, ಮೋಹನ್ ದಾಸ್ ಹೆಗ್ಡೆ, ವೇಣೂರು ದೈ.ಶಿ.ಶಿ ಪರಿವೀಕ್ಷಕ ಸುಜಯ, ಗಂಗಾಧರ್ ಪ್ರಾಂಶುಪಾಲ ಗಂಗಾಧರ, ನಿವೃತ್ತ ಶಿಕ್ಷಕ ಶಿವಶಂಕರ್ ಭಟ್ ಉಪಸ್ಥಿತರಿದ್ದರು.
ಖೋ ಖೋ ಅಂಕಣದ ಉದ್ಘಾಟನೆಯನ್ನು ಭಾಸ್ಕರ್ ಪೈ ನೆರವೇರಿಸಿಕೊಟ್ಟರು. ಬೆಳ್ತಂಗಡಿ ತಾಲೂಕು ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಹುಡುಗಿಯರ ವಿಭಾಗದಲ್ಲಿ ಅಳದಂಗಡಿ ಸೈಂಟ್ ಪೀಟರ್ ಪ್ರಥಮ, ಸರ್ಕಾರಿ ಪ್ರೌಢಶಾಲೆ ಅಳದಂಗಡಿ ದ್ವಿತೀಯ ಸ್ಥಾನ ಪಡೆದರು. ಹುಡುಗರ ವಿಭಾಗದಲ್ಲಿ ವೇಣೂರು ಸ. ಪ. ಪೂ. ಕಾಲೇಜು ಪ್ರೌಢ ಶಾಲಾ ವಿಭಾಗ ಪ್ರಥಮ, ಸರಕಾರಿ ಪ್ರೌಢ ಶಾಲೆ ಅಳದಂಗಡಿ ದ್ವಿತೀಯ ಸ್ಥಾನ ಪಡೆದರು.
ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರು ಸ್ವಾಗತಿಸಿದರು. ಸುಶೀಲ ಜಿ. ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಅಧ್ಯಾಪಕ ರವೀಂದ್ರ ಕೆ. ವಂದಿಸಿದರು.