ಬೆಳ್ತಂಗಡಿ: ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರ ಆಶೀರ್ವಾದದೊಂದಿಗೆ, ಶಿವಪ್ರಸಾದ ಪರೋಹಿತ್ ಸವಣಾಲು ಅವರ ಪೌರೋಹಿತ್ಯದಲ್ಲಿ ಸೆ.16 ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ವಿಶ್ವಕರ್ಮ ಯಜ್ಞ ಮತ್ತು ಪೂಜೆ ನಡೆಯಲಿದೆ.
ಸೆ.16ರಂದು ಬೆಳಿಗ್ಗೆ 11.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಧಾರ್ಮಿಕ ಸಭಾ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಅಧ್ಯಕ್ಷ ಗಣೇಶ್ ಆಚಾರ್ಯ ವಹಿಸಲಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ವಿಶ್ವಕರ್ಮ ಒಕ್ಕೂಟದ ಕ್ಷೇತ್ರದ ಪ್ರತಿನಿಧಿ ಹರ್ಷವರ್ಧನ್ ನಿಟ್ಟೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಉದ್ಯಮಿಗಳಾದ ಸ್ವಸ್ತಿಕ್ ಆರ್ಯ, ವಾಮನ ಆಚಾರ್ಯ, ನಿವೃತ್ತ ಸರಕಾರಿ ನೌಕರ ಸರಸವತಿ ನಿರಂಜನ್ ಆಚಾರ್ಯ, ಎ. ಬಾಲಕೃಷ್ಣ ಆಚಾರ್ಯ, ಸುರೇಂದ್ರ ಆಚಾರ್ಯ ಕನ್ನಾಜೆ, ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕಾ ಸಂಘದ ಗೌರವ ಸಲಹೆಗಾರರ ಪಿ.ಎನ್. ರಮೇಶ್ ಆಚಾರ್ಯ ಮದ್ದಡ್ಕ, ಬೆಳ್ತಂಗಡಿ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷ ಉಷಾ ಹರಿಪ್ರಸಾದ್ ಉಪಸ್ಥಿತಿ ಇರಲಿದ್ದಾರೆ.
ಮಧ್ಯಾಹ್ನ 2ರಿಂದ ವಿ.ಎಸ್.ಶೋ ಮಾಸ್ಟರ್ಸ್ ಉಜಿರೆ ಮತ್ತು ಸ್ವರ ಮಾಧುರ್ಯ ಬೆಳ್ತಂಗಡಿ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3ರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.