ಬಂಗಾಡಿ: ಬೆಳ್ತಂಗಡಿಯ ಇಂಡಿಯನ್ ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ವಿಳಂಬ ಮಾಡುತ್ತಿರುವ ಕಾರಣ ಕಂಪೆನಿಯ ವಿರುದ್ಧ ರೊಚ್ಚಿಗೆದ್ದ ಘಟನೆ ಬಂಗಾಡಿಯಲ್ಲಿ ಆ.30ರಂದು ನಡೆದಿದೆ.
ಬಂಗಾಡಿಯ ಗ್ರಾಹಕರಿಗೆ ಗ್ಯಾಸ್ ನೀಡದೆ ಖಾಲಿ ಸಿಲಿಂಡರನ್ನು ಸಾಗಟ ಮಾಡುತ್ತಿದ್ದ ವಾಹನವನ್ನು ಸಾರ್ವಜನಿಕರು ತಡೆದು ಗ್ಯಾಸ್ ವಿತರಕರು ಮತ್ತು ಮಾಲಕರನ್ನೂ ತರಾಟೆಗೆ ತೆಗೆದುಕೊಂಡರು.
20 ದಿವಸಗಳಿಂದ ಈ ಬಾಗದ ಗ್ರಾಹಕರಿಗೆ ಸಿಲಿಂಡರ್ ನೀಡದೆ ಹಾಗೂ ಏಜನ್ಸಿ ಮಾಲಕರಿಗೆ ಕರೆ ಮಾಡಿದರೂ ಕೂಡ ಸಂಪರ್ಕಕ್ಕೆ ಸರಿಯಾಗಿ ಸಿಗದೆ ಇದ್ದ ಕಾರಣ ವಿತರಕರಿಂದ ಮಾಲಕರಿಗೆ ಕರೆ ಮಾಡಿಸಿ ರೊಚ್ಚಿಗೆದ್ದ ಗ್ರಾಹಕರು ಸಮರ್ಪಕವಾಗಿ ಸಿಲಿಂಡರ್ ಪೊರೈಕೆಯಾಗದೆ ಇದ್ದಲ್ಲಿ ಖಾಲಿ ಸಿಲಿಂಡರ್ ತಮ್ಮ ಕಛೇರಿಗೆ ತಂದು ಪ್ರತಿಭಟಿಸುವುದಾಗಿ ಎಚ್ಚರಿಕೆಯನ್ನು ನೀಡಿದರು.
p>