ಕೊಯ್ಯೂರು: ಕೊಯ್ಯೂರು ಗ್ರಾಮ ಪಂಚಾಯತ್ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಗ್ರಾ.ಪಂ. ಅಧ್ಯಕ್ಷೆ ದಯಾಮಣಿ ರವರ ಅಧ್ಯಕ್ಷತೆಯಲ್ಲಿ ಆ.20 ರಂದು ಆದುರ್ ಪೆರಾಲ್ ಪಂಚದುರ್ಗಾ ಸಭಾಭವನದಲ್ಲಿ ನಡೆಯಿತು.
ಮಾರ್ಗದರ್ಶಕ ಅಧಿಕಾರಿಯಾಗಿ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ರವಿ ಕುಮಾರ್ ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಗ್ರಾ.ಪಂ.ಸದಸ್ಯರಾದ ಜಗನ್ನಾಥ್ , ಸುಮಿತಾ, ದಿವ್ಯಾ, ಗಿರೀಶ್, ಹೇಮಾವತಿ, ಕೆ.ಚಂದ್ರಾವತಿ, ಲೋಕೇಶ್, ಶಾರದ, ವಿಶಾಲಾಕ್ಷಿ, ಯಶವಂತ್, ಇಸುಬು, ಆಶಾಕಾರ್ಯಕರ್ತೆಯರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಪರಮೇಶ್ವರ್ ಖರ್ಚು ಹಾಗೂ ವಾರ್ಡ್ ಸಭೆಯಲ್ಲಿ ಬಂದ ಪ್ರಸ್ತಾವನೆಗಳನ್ನು ಓದಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ .ಎಸ್ ಸ್ವಾಗತಿಸಿದರು.
ಕೊಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಬೆಳ್ತಂಗಡಿ ನಗರ ಪಂಚಾಯತ್ ಗೆ ವಿಲೀನಗೊಳಿಸಿದರ ಬಗ್ಗೆ ಏನು ತೀರ್ಮಾನ ತೆಗೆದುಕೊಂಡಿದ್ದಿರ ಮೂರು ಗ್ರಾಮ ಸಭೆ ನಡೆದಿದೆ ಏನು ತೀರ್ಮಾನ ತೆಗೆದುಕೊಂಡಿದ್ದಿರ ಎಂದು ಸಿದ್ದಿಕ್ ಪ್ರಶ್ನಿಸಿದರು.
ನಗರ ಪಂಚಾಯತ್ ಗೆ ವಿಲೀನವಾದರೆ ಇದರಿಂದ ಗ್ರಾಮದಲ್ಲಿ ಕೃಷಿ ಕುಟುಂಬ ಹೊಂದಿರುವುದರಿಂದ ನಮ್ಮ ಗ್ರಾಮದ ಕೃಷಿಕರಿಗೆ ಅನಾನುಕೂಲ ಜಾಸ್ತಿ ಇರುವುದರಿಂದ ಇದರ ಬಗ್ಗೆ ಏನು ನಿರ್ಣಯ ತೆಗೆದುಕೊಂಡಿದ್ದಿರ ಎಂದು ಸಿದ್ದಿಕ್ ಗ್ರಾಮ ಸಭೆಯಲ್ಲಿ ಪ್ರಶ್ನಿಸಿದರು.