ಮಡಂತ್ಯಾರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ ಯೋಜನಾ ಕಛೇರಿ ವ್ಯಾಪ್ತಿಯ ಮಡಂತ್ಯಾರು ವಲಯದಲ್ಲಿ ನೂತನವಾಗಿ ಆಯ್ಕೆಯಾದ ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಗಾರ ಬಸವನಗುಡಿ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.
ಜಿಲ್ಲಾ ನಿರ್ದೇಶಕರು ಮಹಾಬಲ ಕುಲಾಲ್ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಪದಾಧಿಕಾರಿಗಳ ಪಾತ್ರದ ಕುರಿತು ತರಬೇತಿ ನೀಡಿದ್ದರು ನಾಯಕತ್ವ ಹಾಗೂ ಸoವಹನ ಕುರಿತಾಗಿ ತರಬೇತಿ ನೀಡಿದ್ದ ಯತೀಶ್ ನಿಲಯ ಪಾಲಕರು ರತ್ನಮಾನಸ ಉಜಿರೆ ಇವರು ನಾಯಕತ್ವ ವಹಿಸಿಕೊಂಡವರು ಸಮಾಜ ಮುಖಿಯಾಗಿ ಕೆಲಸ ಮಾಡಬೇಕು ಪದಾಧಿಕಾರಿಗಳು ಸ್ವ-ಇಚ್ಛೆಯಿಂದ ಆಯ್ಕೆಯಾದ ಬಳಿಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ನಿಯಮಡಿಯಲ್ಲಿ ಜನರಿಗೆ ಸೇವೆ ನೀಡಬೇಕು ಎಂದು ಹೇಳಿದರು.
ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಹಾಗೂ ಒಕ್ಕೂಟ ಸಭೆ ನಡೆಸುವ ವಿಧಾನ ಉಪಸಮಿತಿ ಸಭೆಯ ಕುರಿತು ಮಾಹಿತಿಯನ್ನು ಅಮರ್ ಪ್ರಸಾದ್ ಕಚೇರಿ ಲೆಕ್ಕ ಪರಿಶೋಧನಾ ವಿಭಾಗದ ಯೋಜನಾಧಿಕಾರಿ ಅಮರ್ ಪ್ರಸಾದ್ ಪ್ರಾದೇಶಿಕ ಕಚೇರಿ ಉಡುಪಿ ಇವರು ಮಾಹಿತಿ ನೀಡಿದರು ಮತ್ತು ಗುರುವಾಯನಕೆರೆ ಯೋಜನಕಛೇರಿ ಯೋಜನಾಧಿಕಾರಿ ದಯಾನಂದ ಪೂಜಾರಿ, ವಲಯದ ಮೇಲ್ವಿಚಾರಕರು, ಮಡಂತ್ಯಾರು ವಲಯದ ಎಲ್ಲಾ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ವಲಯ ಎಲ್ಲಾ ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು.
ವಲಯದ ನೂತನ ಅಧ್ಯಕ್ಷರಾಗಿ ಜಯ ಪೂಜಾರಿ ಕುತ್ತಿನ ಇವರನ್ನು ಆಯ್ಕೆ ಮಾಡಲಾಯಿತು.