ಗುರುವಾಯನಕೆರೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಹದಿಹರೆಯದವರ ಆರೋಗ್ಯ ಹಾಗೂ ಕ್ಷೇಮ ದಿನಾಚರಣೆ

0

ಕುವೆಟ್ಟು: ಗ್ರಾಮ ವಿಕಾಸ ಸಮಿತಿ ಕುವೆಟ್ಟು, ಗುರುವಾಯನಕೆರೆ ಇದರ ವತಿಯಿಂದ ದಿನಾಂಕ ಆ.10ರಂದು ಗುರುವಾಯನಕೆರೆ ಸರ್ಕಾರಿ ಪ್ರೌಢಶಾಲೆ ಇಲ್ಲಿನ ವಿದ್ಯಾರ್ಥಿನಿಯರಿಗೆ ಹದಿ ಹರೆಯದ ಹೆಣ್ಣು ಮಕ್ಕಳ ಆರೋಗ್ಯ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಆರೋಗ್ಯ ಮಾಹಿತಿಯನ್ನು ತಾಲೂಕು ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ಅಮ್ಮಿ ಸಿಸ್ಟರ್ ರವರು ನೀಡಿದರು.ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ವಸಂತ ಗೌಡ ಉಪಸ್ಥಿತರಿದ್ದರು.

ಅತಿಥಿಯಾಗಿ ಭಾಗವಹಿಸಿದ ಸರ್ಕಾರಿ ಪ್ರೌಢಶಾಲೆ ಗುರುವಾಯನಕೆರೆ ಇಲ್ಲಿನ ಮುಖ್ಯೋಪಾಧ್ಯಾಯಿನಿ ಪದ್ಮಲತಾರವರು ಮಾತನಾಡಿ ಈ ಕಾರ್ಯಕ್ರಮ ನಮ್ಮ ಶಾಲೆಯ ವಿಧ್ಯಾರ್ಥಿನಿಗಳಿಗೆ ಈ ಸಂದರ್ಭದಲ್ಲಿ ಸಿಗಬೇಕಾದ ಅತ್ಯುತ್ತಮ ಮಾಹಿತಿ ಗ್ರಾಮ ವಿಕಾಸ ಸಮಿತಿ ಕುವೆಟ್ಟು ಇವರ ಉತ್ತಮವಾದ ಕಾರ್ಯಕ್ರಮವಾಗಿ ಮೂಡಿ ಬಂದಿದೆ ಎಂದು ಹೇಳಿದರು.

ಶಾಲೆಯ ಅಧ್ಯಾಪಕರಾದ ಜಗನ್ನಾಥ್ ರವರು ಕಾರ್ಯಕ್ರಮ ನಿರ್ವಹಿಸಲು ಸಹಕರಿಸಿದರು ಕಾರ್ಯಕ್ರಮದಲ್ಲಿ ಸುಮಾರು 80 ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹದಿಹರೆಯದ ಹೆಣ್ಣುಮಕ್ಕಳ ಆರೋಗ್ಯ ಎಂಬ ವಿಷಯದ ಕುರಿತು ನೀಡಲಾದ ಮಾಹಿತಿಯ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮದ ಕೊನೆಯಲ್ಲಿ ಮಾಹಿತಿ ಪಡೆದ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಈ ಮಾಹಿತಿ ಕಾರ್ಯಕ್ರಮ ನಮಗೆ ಬಹಳಷ್ಟು ಪ್ರಯೋಜನವಾಗಿದೆ ಎಂದು ಅನಿಸಿಕೆ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಪಡಂಗಡಿ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಮತ್ತು ಸ್ಥಳೀಯ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.ಗ್ರಾಮ ವಿಕಾಸ ಸಮಿತಿ ಸಂಚಾಲಕ ಪ್ರಕಾಶ್ ಕಾಮತ್ ರವರು ಸ್ವಾಗತಿಸಿ, ರಾಮಚಂದ್ರ ಶೆಟ್ಟಿ ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here