ಕೊಕ್ಕಡ: ಮುಂಡೂರ್ ಪಲ್ಕೆ-ಮೈಪಾಲ ರಸ್ತೆ ನಡೆದಾಡಲು ಕಷ್ಟ ಪಡುವ ಪರಿಸ್ಥಿತಿ ವಾಹನ ಸಂಚಾರರ ಸಂಕಷ್ಟ ಹೇಳತೀರದು.ಶಾಲೆ ಅಂಗನವಾಡಿ ಕೇಂದ್ರ ನೂರಾರು ಮನೆಗಳು, ಎoಡೋ ಸಂತ್ರಸ್ತರು ಮತ್ತು ಈ ಭಾಗಕ್ಕೆ ಸಂಚಾರಿ ರೇಷನ್ ವ್ಯವಸ್ಥೆ ಇದ್ದು ಎಲ್ಲರು ಈ ರಸ್ತೆಯ ಅವ್ಯವಸ್ಥೆಯಿಂದ ಪರಿ ತಪಿಸುವಂತಾಗಿದೆ.
ಎಸ್ ಸಿ -ಎಸ್ ಟಿ ಕಾಲೋನಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಈ ರಸ್ತೆ ಎಸ್ ಸಿ -ಎಸ್ ಟಿ ಕಾಲೋನಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಗಿದ್ದು ಗ್ರಾಮ ಪಂಚಾಯತ್ ನಿಂದ ಅಲ್ಪ ಮಟ್ಟದ ದುರಸ್ತಿ ಮಾಡಿದ್ದರು. ಸುರಿಯುತ್ತಿರುವ ಭಾರಿ ಮಳೆಯಿಂದ ಮತ್ತೆ ಹಿಂದಿನ ಸಹಜ ಸ್ಥಿತಿಗೆ ಮರಳಿದೆ.
ಹೆಚ್ಚಿನ ದುರಸ್ತಿಗೆ ಪಂಚಾಯತ್ ಬಳಿ ಹಣದ ಕೊರತೆ: ಶಾಸಕರ ಅನುದಾನದಿಂದ ಅಲ್ಲಲ್ಲಿ ಕಾಂಕ್ರೀಟ್ ಶಾಸಕರ ಅನುದಾನದಿಂದ ತೀರಾ ಸಮಸ್ಯೆ ಎನಿಸಿದ ಜಾಗಕ್ಕೆ ಒಟ್ಟು 50ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದ್ದರು ಬಾಕಿ ಇರುವ ಕಡೆ ಆಗದೇ ಇರುವುದೇ ಸಮಸ್ಯೆ ತಹಶೀಲ್ದಾರ್ ಗೆ ಗ್ರಾಮಸ್ಥರಿಂದ ಮನವಿ.
ತಹಶೀಲ್ದಾರ್ ಗೆ ಊರಿನವರು ಸೇರಿ ಮನವಿ ಮಾಡಿದ್ದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸರಿಮಾಡಿಕೊಡುವ ಭರವಸೆ ನೀಡಿದ್ದು ಅದು ಇನ್ನೂ ಭರವಸೆಯಾಗಿಯೇ ಉಳಿದಿದೆ.