


ವೇಣೂರು: ಉಜಿರೆ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ಅ.25ರಂದು ನಡೆದ ತಾಲೂಕು ಮಟ್ಟದ ಅಥ್ಲೆಟಿಕ್ ಕ್ರೀಡಾ ಸ್ಪರ್ಧೆಯಲ್ಲಿ ನಿಟ್ಟಡೆ, ಕುಂಭಶ್ರೀ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಶ್ರೇಷ್ಠ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಕುಂಭಶ್ರೀ ಶಿಕ್ಷಣ ಸಂಸ್ಥೆ ಶಿಕ್ಷಣದ ಜೊತೆಗೆ ಕ್ರೀಡೆಗೂ ಸಮಪ್ರಮಾಣದ ಪ್ರೋತ್ಸಾಹ ನೀಡುತ್ತಾ, ವಿದ್ಯಾರ್ಥಿಗಳನ್ನು ಸಮಗ್ರ ಅಭಿವೃದ್ಧಿಯ ದಾರಿಯತ್ತ ಮುನ್ನಡೆಸುತ್ತಿದೆ. ಇದರ ಜೀವಂತ ಉದಾಹರಣೆಯೇ ಈ ಬಾರಿ ವಿದ್ಯಾರ್ಥಿನಿಯರ ಕ್ರೀಡಾ ಸಾಧನೆ.
ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕೀರ್ತಿ, 200 ಮೀಟರ್ ಹಾಗೂ 100 ಮೀಟರ್ ಓಟ ಈ ಎರಡೂ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೆಯೇ ಹುಡುಗಿಯರ ರಿಲೇ ತಂಡ (4×100 ಮೀಟರ್) ತೃತೀಯ ಸ್ಥಾನ ಪಡೆದು ಕಾಲೇಜಿನ ಹೆಮ್ಮೆ ಹೆಚ್ಚಿಸಿದೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪೃಥ್ವಿ ,ಗುಂಡು ಎಸೆತ ಸ್ಪರ್ಧೆಯಲ್ಲಿ (7.54 ಮೀಟರ್) ಎರಡನೇ ಸ್ಥಾನ ತಮ್ಮದಾಗಿಸಿದ್ದಾರೆ.









