ಸರಳಿಕಟ್ಟೆಯ ನುಶ್ರತ್‌ಗೆ ಡಾಕ್ಟರೇಟ್ ಪದವಿ

0

ಬೆಳ್ತಂಗಡಿ: ಉಪ್ಪಿನಂಗಡಿ ಸಮೀಪದ ಸರಳಿಕಟ್ಟೆಯ ನುಶ್ರತ್ ಅವರಿಗೆ ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ‘ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆಂಡ್ ಕಾಮರ್ಸ್’ ಪಿಎಚ್‌ಡಿ ಪದವಿ ನೀಡಿದೆ.
ಸಬಲೀಕರಣವನ್ನು ಹೆಚ್ಚಿಸುವಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರಲ್ಲಿ ಸರಕಾರಿ ಶೈಕ್ಷಣಿಕ ಯೋಜನೆಗಳ ಬಗ್ಗೆ ಜಾಗೃತಿ ಮತ್ತು ಭಾಗವಹಿಸುವಿಕೆಯ ಮಟ್ಟ’ ಎಂಬ ವಿಷಯದ ಕುರಿತು ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ಲಭಿಸಿದೆ. ಡಾ.ನಿಯಾಝ್ ಪಾನಕಜೆ ಮತ್ತು ಡಾ.ಶೈಲಶ್ರೀ ವಿ.ಟಿ ಮಾರ್ಗದರ್ಶನದಲ್ಲಿ ಅವರು ಈ ಪ್ರಬಂಧ ಸಿದ್ಧಪಡಿಸಿದ್ದಾರೆ. ಬರಕಾ ಇಂಟರ್‌ನ್ಯಾಶನಲ್ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿರುವ ಡಾ.ನುಶ್ರತ್ ಸರಳಿಕಟ್ಟೆ ನಿವಾಸಿ ಉಸ್ಮಾನ್ ಹಾಜಿ ಮತ್ತು ಆಯಿಶ ದಂಪತಿಯ ಪುತ್ರಿ. ಶಕೀಲ್ ಅಹ್ಮದ್‌ರ ಪತ್ನಿ.

LEAVE A REPLY

Please enter your comment!
Please enter your name here