ಬೆಳ್ತಂಗಡಿ: ತೆಕ್ಕಾರು ಗ್ರಾಮದ ಸರಳಿಕಟ್ಟೆಯಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯ ಹಂಚಿನ ಮಾಡು ಕುಸಿದ ಕಾರಣ ಶಾಲಾ ಮಕ್ಕಳನ್ನು ಪಕ್ಕದ ಕೊಠಡಿಗೆ ಸ್ಥಳಾಂತರಿಸಲಾಗಿದೆ.
ಸುಮಾರು ೫೦ ವರ್ಷಕ್ಕೂ ಹೆಚ್ಚು ಇತಿಹಾಸವುಳ್ಳ ಈ ಶಾಲೆಯ ಮಾಡು ಶಿಥಿಲಾವಸ್ಥೆಗೆ ತಲುಪಿದ್ದು ಮಳೆಗೆ ಕುಸಿದಿತ್ತು. ಮಾಡು ಕುಸಿದು ಹಂಚುಗಳು ಬೀಳುತ್ತಿದ್ದಂತೆಯೇ ಶಿಕ್ಷಕರು ಮಕ್ಕಳನ್ನು ಬೇರೆ ಕೊಠಡಿಗೆ ಸ್ಥಳಾಂತರಿಸಿ ಅನಾಹುತ ತಪ್ಪಿಸಿದ್ದರು.
ಎಸ್‌ಡಿಎಂ ಅಧ್ಯಕ್ಷ ದಯಾನಂದ ಮೂಲ್ಯ ಮತ್ತು ಗ್ರಾಮಸ್ಥ ಇನಾಸ್ ರೊಡ್ರಿಗಸ್ ಸಹಕಾರ ನೀಡಿದ್ದರು. ಶಾಲೆಗೆ ತಾ.ಪಂ. ಇ.ಓ. ಭವಾನಿಶಂಕರ್ ಮತ್ತು ಬಿಇಒ ತಾರಕೇಸರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
p>