ಬೆಳ್ತಂಗಡಿ: ಶಿಬಾಜೆಯ ಬರ್ಗುಲಾದಲ್ಲಿ ಜು.25ರಂದು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿಯ ಮನೆಯವರಿಗೆ ಮೆಸ್ಕಾಂ ಇಲಾಖೆಯ ಪರಿಹಾರವಾಗಿ ರೂ.5 ಲಕ್ಷದ ಚೆಕ್ ನ್ನು ಶಾಸಕ ಹರೀಶ್ ಪೂಂಜರವರ ಮುಖಾಂತರ ಕುಟುಂಬಸ್ಥರಿಗೆ ಶ್ರಮಿಕ ಕಾರ್ಯಾಲಯದಲ್ಲಿ ಜು.1ರಂದು ವಿತರಿಸಿದರು.
ಈ ವೇಳೆ ಶಾಸಕ ಹರೀಶ್ ಪೂಂಜ ಮಾತನಾಡಿ ಮೆಸ್ಕಾಂ ಇಲಾಖೆಯ ನಿರ್ಲಕ್ಷದಿಂದ ಯುವತಿ ಸಾವನ್ನಪ್ಪಿದ್ದರಿಂದ ಇಲಾಖೆಯಿಂದ 5 ಲಕ್ಷ ಪರಿಹಾರವನ್ನು ನೀಡಲಾಯಿತು.
ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪರಿಹಾರ ದೊರಕಿಸುವಂತೆ ಇಲಾಖೆಗಳಿಗೆ ಹಾಗೂ ಸಚಿವರಿಗೆ ಮನವಿಯನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಉಪ ವಿಭಾಗದ ಸ.ಕಾ. ಇಂಜಿನಿಯರ್ ಕ್ಲೀಮೆಂಟ್ ಬೆಂಜಮಿನ್ ಬ್ರಾಗ್ಸ್, ಶಿಬಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿನಕರ ಕುರುಪ್ ಬರ್ಗುಳ, ಶಿಬಾಜೆ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ರತೀಶ್ ಗೌಡ ಹಾಗೂ ಮೃತ ಯುವತಿಯ ಕುಟುಂಬಸ್ಥರು ಉಪಸ್ಥಿತರಿದ್ದರು.
p>