ನಾರಾವಿ ವಲಯದಲ್ಲಿ ನೂತನವಾಗಿ ಆಯ್ಕೆಯಾದ ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

0


ನಾರಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಾರಾವಿ ವಲಯದಲ್ಲಿ ನೂತನವಾಗಿ ಆಯ್ಕೆಯಾದ 11 ಒಕ್ಕೂಟಗಳ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ ನಾರಾವಿಯ ಶ್ರೀ ಮಹಾವೀರ ಸಬಾಭವನದಲ್ಲಿ ಜರಗಿತು.

ತರಬೇತಿಯ ಉದ್ಘಾಟನೆಯನ್ನು ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರ ಉದ್ಘಾಟಿಸಿ ಒಕ್ಕೂಟದ ಪದಾಧಿಕಾರಿಗಳು ಸೇವಾಮನೋ ಭಾವನೆಯನ್ನು ಬೆಳೆಸಿಕೊಂಡು ಪಾಲುದಾರ ಕುಟುಂಬಗಳಿಗೆ ಸಹಕಾರ ನೀಡಬೇಕು ಎಂದು ಶುಭ ಹಾರೈಸಿದರು.
JCI ತರಬೇತಿದಾರ ಚಂದ್ರಹಾಸ ಬಳೆಂಜ ನಾಯಕತ್ವ ಗುಣ ಲಕ್ಷಣಗಳ ಕುರುತು ವಿವರಿಸಿದರು.

ಸೇವಾ ಪ್ರತಿನಿಧಿಗಳ ವಿಭಾಗದ ಯೋಜನಾಧಿಕಾರಿ ಶಿವ ಪ್ರಸಾದ್ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಹಾಗು ಒಕ್ಕೂಟ ಸಭೆ ನಡೆಸುವ ಪ್ರಾಯೋಗಿಕ ತರಬೇತಿಯನ್ನು ನೀಡಿದರು.

ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ ಉಪಸ್ಥಿತರಿದ್ದರು.

ವಲಯ ಮೇಲ್ವಿಚಾರಕಿ ದಮಯಂತಿ ಸ್ವಾಗತಿಸಿದರು.

ಕುತ್ಲೂರು ಕ್ಷೇತ್ರದ ಸೇವಾ ಪ್ರತಿನಿಧಿ ಕೇಶವ ನಿರೂಪಿಸಿದರು.

ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಹಾಜರಿದ್ದರು.

ನಾರಾವಿ ವಲಯದ ವಲಯ ಅದ್ಯಕ್ಷ ಶೇಕರ್ ಹೆಗ್ಡೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here