ಬೆಳ್ತಂಗಡಿ: ಕರಾವಳಿ ದೈವಾರಾಧನೆಗೆ ವಿಶೇಷವಾದ ಸ್ಥಾನಮಾನವಿದೆ.
ಇಲ್ಲಿ ದೈವ, ದೇವರುಗಳು ಆಗಾಗ್ಗೆ ತಮ್ಮ ಕಾರ್ಣಿಕ, ಪವಾಡಗಳನ್ನು ತೋರಿಸುತ್ತಲೇ ಇರುತ್ತಾರೆ. ಇದೀಗ ಅಂತಹ ಪವಾಡವೊಂದಕ್ಕೆ ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಶ್ರೀ ಸತ್ಯದೇವತೆ ದೈವಸ್ಥಾನ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಈ ದೈವಸ್ಥಾನದ ಮುಂದೆ ಸಾಗುವ ಹೆಚ್ಚಿನ ವಾಹನ ಸವಾರರು ಈ ದೈವಸ್ಥಾನಕ್ಕೆ ಬಂದು ಕೈ ಮುಗಿದು ಹೋಗುವುದು ವಾಡಿಕೆ.
ಹೀಗೆ ಆಟೋ ಚಾಲಕರೊಬ್ಬರು ಜೂನ್ 28ರಂದು ಬೆಳಗ್ಗೆ 10-30ರ ಸುಮಾರಿಗೆ ತಮ್ಮ ಎಲೆಕ್ಟಿಕ್ ಆಟೋವನ್ನು ದೈವಸ್ಥಾನದ ಮುಂಭಾಗದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿ ದೈವಸ್ಥಾನಕ್ಕೆ ಬಂದು ಕೈ ಮುಗಿದು ಇನ್ನೇನು ಹೊರಗೆ ಬರುವಷ್ಟರಲ್ಲಿ ಅವರ ಕಣ್ಮುಂದೆ ಅವರು ನಿಲ್ಲಿಸಿದ್ದ ಆಟೋ ಇದಕ್ಕಿದ್ದಂತೆ ಚಲಿಸಿದೆ. ನೋಡುನೋಡುತ್ತಿದ್ದಂತೆ ಆಟೋ ಚಲಿಸುವುದನ್ನು ಗಮನಿಸಿದ ಚಾಲಕ ಓಡಿಹೋಗಿ ಆಟೋ ನಿಲ್ಲಿಸಿದ್ದಾರೆ.
ಆದರೆ ಅದೃಷ್ಟವಶಾತ್ ಯಾವುದೇ ಅಪಾಯ ಉಂಟಾಗಿಲ್ಲ.
ಘಟನೆಯ ದೃಶ್ಯ ದೈವಸ್ಥಾನದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇನ್ನು ದೈವಸ್ಥಾನ ಸಾಕಷ್ಟು ಕಾರ್ಣಿಕವನ್ನು ಹೊಂದಿದೆ. ಇಲ್ಲಿ ಏನೇ ಬಂದು ಭಕ್ತರು ಪ್ರಾರ್ಥನೆ ಮಾಡಿಕೊಂಡರು ಅದು ಈಡೇರುತ್ತದೆ ಅನ್ನೋದು ನಂಬಿಕೆ.
ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಉಡುಪಿಯ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿನ ಪ್ರಕರಣದಲ್ಲಿ ಅಪವ ಆಪ್ತ ರಮ್ಯ ಶೆಟ್ಟಿಗೆ ಪೊಲೀಸರ ಹುಡುಕಾಟ ನಡೆಸುತ್ತಿದ್ದಾಗ ಆಕೆ ತಪ್ಪಿಸಿಕೊಂಡು ಕಾರಿನಲ್ಲಿ ಉಡುಪಿಯಿಂದ ಪರಾರಿಯಾಗುತ್ತಿರುವಾಗ ಇದೇ ಕ್ಷೇತ್ರದ ಮುಂದೆ ಕಾರಿನ ಟೈರ್ ಪಂಚರ್ ಆಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಳು.
ಇದೇ ರೀತಿ ಅನೇಕ ಪವಾಡಗಳಿಗೆ ಈ ಕ್ಷೇತ್ರ ಸಾಕ್ಷಿಯಾಗಿದೆ.