ಮಾಂಡೋವಿ ಮೋಟಾರ್ಸ್ 40ನೇ ವರ್ಷಾಚರಣೆ ಪ್ರಯುಕ್ತ ಗುರುವಾಯನಕೆರೆಯಲ್ಲಿ ಮಾರುತಿ ಸುಜುಕಿ ಕಾರುಗಳ ಬುಕ್ಕಿಂಗ್ ಆರಂಭ

0

ಗುರುವಾಯನಕೆರೆ: ನಾರಾವಿ ಮಾಂಡೋವಿ ಮೋಟಾರ್ಸ್‌ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆಯು ಗ್ರಾಹಕರು ನೆಚ್ಚಿನ ಕಾರುಗಳನ್ನು ಖರೀದಿಸಲು ಗುರುವಾಯನಕೆರೆ ಕೆನರಾ ಬ್ಯಾಂಕ್ ಸಮೀಪ ಪ್ರದರ್ಶನವನ್ನು ಜೂ.15ರಂದು ಹಮ್ಮಿಕೊಂಡಿದೆ.

ಗ್ರಾಹಕರ ಮೆಚ್ಚಿನ ಮಾರುತಿ ಸುಜುಕಿ ಕಾರುಗಳನ್ನು ಖರೀದಿಸಲು ಬುಕ್ಕಿಂಗ್‌ ಆರಂಭಗೊಂಡಿದೆ.ಕಾರುಗಳ ಪ್ರದರ್ಶನ ಮೇಳದ ಉದ್ಘಾಟನೆಯನ್ನು ಎಕ್ಸೆಲ್‌ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾ‌ರ್ ಜೈನ್‌,ಕೆನರಾ ಬ್ಯಾಂಕ್ ಮ್ಯಾನೇಜರ್ ನಾಗರಾಜ್,ಗುರುವಾಯನಕೆರೆ ಸ.ಹಿ.ಪ್ರಾ ಶಾಲಾ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಬ್ದುಲ್ ಹಕೀಂ,ಗ್ರಾಹಕ ಅಜೀಜ್ ಉಪಸ್ಥಿತರಿದ್ದರು.

ಮಾಂಡೋವಿ ಮೋಟಾರ್ಸ್ ಟೀಮ್ ಮ್ಯಾನೇಜ‌ರ್ ಚರಣ್ ಎಲ್ಲರನ್ನು ಸ್ವಾಗತಿಸಿದರು. ಸೇಲ್ಸ್ ಆಫೀಸರ್ ಸುಹಾಸ್ ಕುಮಾರ್ ವಿವರಣೆ ನೀಡಿದರು.ಸುಚಿತ್ರಾ ವಂದಿಸಿದರು.ಸಿಬ್ಬಂದಿಗಳಾದ ನವೀನ್,ಪುನೀತ್ ಸಹಕರಿಸಿದರು.

ಗುರುವಾಯನಕೆರೆ ಕೆನರಾ ಬ್ಯಾಂಕ್‌ ಬಳಿ ಬೆಳಿಗ್ಗೆ 9:30 ರಿಂದ ಸಂಜೆ 5:00ರವರೆಗೆ ಕಾರುಗಳ ಪ್ರದರ್ಶನ ಹಾಗೂ ಹೊಸ ಕಾರುಗಳಿಗೆ ಬುಕ್ಕಿಂಗ್ ಆರಂಭಗೊಂಡಿದೆ. ಹಾಗೂ ಮೆಚ್ಚಿನ ಮಾರುತಿ ಸುಜುಕಿ ಕಾರುಗಳನ್ನು ಬುಕ್ಕಿಂಗ್ ಮಾಡಿ ಮತ್ತು ರೂ. 10000/- ಮೌಲ್ಯದ ಪರಿಕರಗಳನ್ನು ಪಡೆದುಕೊಳ್ಳಬಹುದು, ಮೊದಲ 40 ಗ್ರಾಹಕರಿಗೆ ಮಾತ್ರ ಅವಕಾಶವಿದೆ.

ಹೆಚ್ಚಿನ ವಿವರಗಳಿಗಾಗಿ ಈ ನಂಬರನ್ನು ಸಂಪರ್ಕಿಸಬಹುದಾಗಿದೆ 99724 60032.

LEAVE A REPLY

Please enter your comment!
Please enter your name here