ಉಜಿರೆ: ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಪಾಲಕರ ಹಬ್ಬವನ್ನು ಜೂ.13ರಂದು ಆಚರಿಸಲಾಯಿತು.
ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ವಲಯದ ಪ್ರಧಾನ ಧರ್ಮಗುರು ವಂ.ಫಾ.ವಾಲ್ಟರ್ ಡಿಮೆಲ್ಲೊ ಪ್ರಧಾನಯೋಜಕರಾಗಿ ಬಲಿ ಪೂಜೆ ಅರ್ಪಿಸಿದರು.
ಉಜಿರೆ ಚರ್ಚ್ ಧರ್ಮಗುರು ವಂ.ಫಾ.ಅಬೆಲ್ ಲೋಬೊ, ಅನುಗ್ರಹ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಂ.ಫಾ.ವಿಜಯ್ ಲೋಬೊ, ಬೆಳ್ತಂಗಡಿ ತಾಲೂಕಿನ ಎಲ್ಲ ಚರ್ಚ್ ಗಳ ಧರ್ಮಗುರುಗಳು, ಉಜಿರೆ ದಯಾಳ್ ಭಾಗ್ ಆಶ್ರಮದ ಧರ್ಮ ಗುರುಗಳು, ಮಡಂತ್ಯಾರು ಆಶಾ ದೀಪದ ಧರ್ಮಗುರುಗಳು, ಧರ್ಮ ಭಗಿನಿಯರು ಉಪಸ್ಥಿತರಿದ್ದರು.
ಹಬ್ಬಕ್ಕೆ ದಾನ ನೀಡಿದ ಭಕ್ತಾದಿಗಳಿಗೆ ವಲಯ ಧರ್ಮಗುರು ವಂ.ಫಾ.ವಾಲ್ಟರ್ ಡಿಮೆಲ್ಲೊ ಮೊಂಬತ್ತಿ ನೀಡಿ ಗೌರವಿಸಿದರು.ದಾನಿಗಳ ಪ್ರಯೋಜಕತ್ವದಲ್ಲಿ ಭಕ್ತಾದಿಗಳಿಗೆ ಸೇವಾ ರೂಪದ ಭೋಜನ ವ್ಯವಸ್ಥೆ ಏರ್ಪಡಿಸಲಾಹಿತು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಹಬ್ಬ ಆಚರಣಾ ಸಮಿತಿ ಹಬ್ಬದ ಯಶಸ್ವಿಗೆ ಸಹಕರಿಸಿದರು.
ವಾರ್ಷಿಕ ಹಬ್ಬದ ಪ್ರಯುಕ್ತ 13 ದಿನಗಳ ನೊವೇನಾ ಪವಾಡ ಪುರುಷ ಸಂತ ಅಂತೋಣಿಯವರ ಹಬ್ಬವು ಯಶಸ್ವಿಯಾಗಿ ನೆರೆದಿದೆ ಎಂದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ತಮ್ಮ ತಮ್ಮ ಬೇಡಿಕೆಗಳನ್ನು ಅರ್ಪಿಸಿದರು.
ಭೋಜನ ಸಂದರ್ಭದಲ್ಲಿ ಸಂಗೀತ ರಸ ಮಂಜರಿ ನಡೆಯಿತು. ಬಳಿಕ ಐ ಸಿ ವೈ ಯಂ ಸಂಘಟನೆಯಿಂದ ಆಯೋಜಿಸಿದ ನೂತನ ಗೃಹ ನಿರ್ಮಾಣಕ್ಕೆ ಯೋಜನೆ ರೂಪಿಸಿದ ಲಕ್ಕಿಡಿಪ್ ಡ್ರಾ ನೆರವೇರಿಸಲಾಯಿತು.