ಪುದುವೆಟ್ಟು: ಶ್ರೀ.ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಜೂ.13ರಂದು ಆರೋಗ್ಯ ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮೇಲಿನಡ್ಕ ಉಪ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಭಾರತಿ ಇವರು ವಿದ್ಯಾರ್ಥಿಗಳಿಗೆ ಮಳೆಗಾಲ ಆರಂಭವಾಗುವ ಸಂದರ್ಭದಲ್ಲಿ ಬರಬಹುದಾದ ಖಾಯಿಲೆಗಳಾದ ಡೆಂಗ್ಯೂ, ಮಲೇರಿಯಾ ಇವುಗಳ ಬಗ್ಗೆ ಜಾಗೃತಿ ಮತ್ತು ವೈಯಕ್ತಿಕ ಶುಚಿತ್ವ ಮತ್ತು ಆರೋಗ್ಯಕರ ಅಭ್ಯಾಸಗಳ ಬಗ್ಗೆ ಅತ್ತ್ಯುತ್ತಮ ಮಾಹಿತಿ ನೀಡಿದರು.
ಕಾರ್ಯಕ್ರಮದ ಮಾರ್ಗದರ್ಶಕ ಶಾಲಾ ಮುಖ್ಯ ಶಿಕ್ಷಕ ಶೀನಪ್ಪಗೌಡ ಸ್ವಾಗತಿಸಿ, ಅಧ್ಯಾಪಕ ಪವನ್ ಕುಮಾರ್ ಇವರು ಧನ್ಯವಾದಿಸಿ, ಆಶಾ ಕಾರ್ಯಕರ್ತೆ ಹರಿಣಾಕ್ಷಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
p>