ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜಿಗೆ ಶೈಕ್ಷಣಿಕ ವರ್ಷದಲ್ಲಿ ಎರಡು ಮಹತ್ವದ ರ್‍ಯಾಂಕ್ ಮುಡಿಗೇರಿಸಿಕೊಳ್ಳುವುದರ ಮೂಲಕ ತನ್ನ ಶೈಕ್ಷಣಿಕ ಸಾಧನೆಯನ್ನು ಮುಂದುವರೆಸಿದೆ.
ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2022-23ನೇ ಸಾಲಿನ ಪದವಿ ಪರೀಕ್ಷೆಯಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಸೇಕ್ರೆಡ್ ಹಾರ್ಟ್ ಕಾಲೇಜಿನ ವಿದ್ಯಾರ್ಥಿನಿ ರಚನಾ ನಾಲ್ಕನೇ ರ್‍ಯಾಂಕ್ ಗಳಿಸುವುದರ ಮೂಲಕ ಕಾಲೇಜಿನ ಘನತೆಯನ್ನು ಹೆಚ್ಚಿಸಿದ್ದಾರೆ. ಕುಮಾರಿ ರಚನಾಳು ಕಲಿಕೆ ಮಾತ್ರವಲ್ಲದೆ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಕಾಲೇಜನ್ನು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರತಿನಿಧಿಸಿ, ಅನೇಕ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ. ಇವರು ಮಡಂತ್ಯಾರಿನ ನಿವಾಸಿಗಳಾಗಿರುವ ರಾಜೇಶ್ ಬಾಳಿಗ ಹಾಗೂ ರಾಜೇಶ್ವರಿ ದಂಪತಿಗಳ ಪುತ್ರಿ.
ಕಳೆದ ಶೈಕ್ಷಣಿಕ ವರ್ಷದ ಎಂ.ಕಾಂ ಸ್ನಾತಕೋತ್ತರ ಪರೀಕ್ಷೆಯಲ್ಲಿ ರೀನಾ ಜೆನಿಫರ್, ನಾಲ್ಕನೇ ರ್‍ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.ಇವರು ಕಾರ್ಕಳ ನಿವಾಸಿಯಾಗಿದ್ದು, ಸೋಲೆಮನ್ ಮತ್ತು ಕುಮಾರಿ ಸೋಲೆಮನ್ ದಂಪತಿಗಳ ಸುಪುತ್ರಿ.
ಈರ್ವರು ವಿದ್ಯಾರ್ಥಿನಿಯರು ತಮ್ಮ ಅವಿರತ ಓದು, ಶೈಕ್ಷಣಿಕ ಬದ್ಧತೆ ಮತ್ತು ರಚನಾತ್ಮಕ ಶೈಕ್ಷಣಿಕ ಚಟುವಟಿಕೆಗಳಿಂದ ಈ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ. ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸವಾಲುಗಳನ್ನು ಎದುರಿಸುವುದಕ್ಕೆ ಪೂರಕ ವಾತಾರಣವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡುತ್ತಿದೆ.ವಿದ್ಯಾರ್ಥಿನಿಯರ ಈ ಸಾಧನೆಯ ಹಿಂದಿರುವ ಅವರ ಹೆತ್ತವರು ಮತ್ತು ಶಿಕ್ಷಕರನ್ನು ಕಾಲೇಜಿನ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.