ಬೆಳಾಲಿನಲ್ಲಿ ರೈತ ನೋಂದಾವಣೆ ಹಾಗೂ ಮಾಹಿತಿ ಶಿಬಿರ

0

ಬೆಳಾಲು: ಕೇಂದ್ರ ಸರಕಾರದ ಅನುದಾನದಿಂದ ನಡೆಸಲ್ಪಡುವ ಮತ್ತು ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧೀನಕ್ಕೆ ಒಳಪಟ್ಟ ರೈತ ಉತ್ಪದಕರ ಕಂಪನಿಯ ವತಿಯಿಂದ, ಗ್ರಾಮ ಪಂಚಾಯತ್ ಬೆಳಾಲು ನಾಗ0ಬಿಕ ಸಂಜೀವಿನಿ ಒಕ್ಕೂಟ ಬೆಳಾಲು ಇದರ ಸಹಭಾಗಿತ್ವದಲ್ಲಿ ರೈತರ ಸದಸ್ಯತ್ವ ನೋಂದಾವಣೆ ಮತ್ತು ರೈತರಿಗೆ ಮಾಹಿತಿ ಕಾರ್ಯಕ್ರಮ ಜೂ.7ರಂದು ಬೆಳಾಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರಗಿತು.

ಗ್ರಾಮ ಪಂಚಾಯತ್ ನ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಮಧುರ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಜಿರೆ ರೈತ ಉತ್ಪದಕರ ಸಂಘದ ನಿರ್ದೇಶಕ ಜಯಂತ್, ಕಾರ್ಯನಿರ್ವಹಣಾಧಿಕಾರಿ ದಿನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

2 ಗ್ರಾಮದ ಕೃಷಿ ಸಖಿಯರು ಭಾಗವಹಿಸಿದರು.ನಿರ್ದೇಶಕರು ಮಾತನಾಡಿ ನೋಂದಾಯಿತ ರೈತರಿಗೆ ರಿಯಾಯಿತಿ ದರದಲ್ಲಿ ಕೃಷಿ ಪರಿಕರಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

46 ರೈತರ ಸದಸ್ಯತ್ವ ನೋಂದಾವಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಎಂ.ಬಿ.ಕೆ, ಪಶು ಸಖಿ, ಕೃಷಿ ಸಖಿ ಮತ್ತು ಗ್ರಾಮದ ರೈತರು ಭಾಗವಹಿಸಿದ್ದರು.

p>

LEAVE A REPLY

Please enter your comment!
Please enter your name here