

ಬೆಳ್ತಂಗಡಿ: ನಾಮಪತ್ರ ಹಾಕುವ ಮುಂಚೆ ಬೆಳ್ತಂಗಡಿಗೆ ಬಂದು ಪದ್ಮರಾಜ್ ಆರ್ ಪೂಜಾರಿ ಪ್ರಚಾರ ಮಾಡಿದ್ದಾರೆ.ರಕ್ಷಿತ್ ಶಿವರಾಂ ನಗರ ಮತ್ತು ಗ್ರಾಮೀಣ ಅಧ್ಯಕ್ಷರು 84 ಗ್ರಾಮಗಳಿಗೆ ಹೋಗಿ ಮತ ಪ್ರಚಾರ ಮಾಡಿದ್ದಾರೆ.ಇನ್ನೂ 17 ನೇ ತಾರೀಕುದಂದು ಪದ್ಮರಾಜ್ ಆರ್ ಬೆಳ್ತಂಗಡಿಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆ ತನಕ ಮತಪ್ರಚಾರ ಮಾಡಲಿದ್ದಾರೆ.
ಇನ್ನೂ ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್, ರಮಾನಾಥ್ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ (ನಗರ) ಅಧ್ಯಕ್ಷರುಗಳಾದ ಸತೀಶ್ ಬಂಗೇರ ಕಾಶಿಪಟ್ಣ, ಹಾಗೂ ನಾಗೇಶ್ ಕುಮಾರ್ ಗೌಡ, ಬೆಳ್ತಂಗಡಿ ವಿಧಾನಸಭಾ ಚುನಾವಣಾ ಉಸ್ತುವರಿ ಮತ್ತು ಪ್ರಚಾರ ಸಮಿತಿಯ ಧರಣೇಂದ್ರ ಕುಮಾರ್ ಹಾಗೂ ಶೇಖರ್ ಕುಕ್ಕೇಡಿ ಭಾಗವಹಿಸಲಿದ್ದಾರೆ. ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಕೆ.ಕೆ ಸಮೀರ್ ಹೇಳಿದರು ಅವರು ಎ.16 ರಂದು ಬ್ಲಾಕ್ ಕಾಂಗ್ರೆಸ್ ಕಛೇರಿ ಬೆಳ್ತಂಗಡಿ ಸಂತಕಟ್ಟೆಯಲ್ಲಿ ಮಾತನಾಡಿದರು.
ಇನ್ನೂ ಎ.21 ಕ್ಕೆ ನಮ್ಮ ಬೂತ್ ನಮ್ಮ ಹೊಣೆ ಎಂಬ ಕಾರ್ಯಕ್ರಮ ಆಯೋಜಿಸಿದ್ದೇವೆ ಅದರಲ್ಲಿ ಪ್ರತಿ ಬೂತುವಿನ ನಾಯಕರು ಮನೆ ಮನೆಗೆ ಹೋಗಿ ಮತವನ್ನು ಕೇಳಬೇಕು ಮತ್ತು ಬೂತುವಿನ ನಾಯಕರು ಅತೀ ಹೆಚ್ಚುಬೂತುವಿನಲ್ಲಿ ಮತ ಬರುವ ರೀತಿ ನೋಡಿಕೊಳ್ಳಬೇಕು ಅದಕ್ಕಾಗಿ ನಮ್ಮ ಬೂತ್ ನಮ್ಮ ಹೊಣೆ ಎಂಬ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ.
ಇನ್ನೂ ಬಿಜೆಪಿ ಅವರು 10 ವರ್ಷದಿಂದ ಅಲ್ಪಸಂಖ್ಯಾತರನ್ನು ಬದುಕಲು ಬಿಡಲಿಲ್ಲ.ಹತ್ತು ವರ್ಷದಿಂದ ನಮ್ಮ ಬದುಕು ಬರ್ಬರವಾಗಿದೆ ಎಂದು ಹೇಳಿದರು.ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎಲ್ಲಾ ಪ್ರೀ ಸಿಕ್ಕಿದೆ ಒಂಬತ್ತು ತಿಂಗಳಿನಿಂದ ಬೆಳ್ತಂಗಡಿಯಲ್ಲಿ 90 ರಿಂದ 95 ಶೇಕಡ ಮನೆಗಳಿಗೆ ಒಂದರ ಒಂದು ಗ್ಯಾರಂಟಿ ಸಿಕ್ಕಿದೆ ಇನ್ನೂ ಅತೀ ಹೆಚ್ಚು ಫಲಾನುಭವಿಗಳು ಇರುವುದು ದಕ್ಷಿಣಕನ್ನಡದಲ್ಲಿ ಎಂದು ಹೇಳಿದರು
ಇನ್ನೂ ಮಂಜುರಾದ ಕಾಮಗಾರಿಯನ್ನು ತಡೆಹಿಡಿದಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ಹೇಳುತ್ತಾರೆ ಆದರೆ ಕರಾಯ ಗ್ರಾಮದಲ್ಲಿ ಮಂಜುರಾದ 15 ಎಕ್ರೆರೆ ಜಾಗ ಎಲ್ಲಿದೆ.ಮೌಜದ್ ಶಾಲೆ ಯಾವಾಗ ಸ್ಥಾಪನೆಯಾಗುತ್ತಾದೆ.ಈ ಸಂಶಯ ಶಾಸಕರು ನಿರ್ವಾಹಣೆ ಮಾಡಬೇಕು ಎಂದು ಹೇಳಿದರು.
ಇನ್ನೂ ಮುಖ್ಯಮಂತ್ರಿ ಬೆಳ್ತಂಗಡಿಗೆ ಬಂದು ಹೊಬಳಿ ಕೊಕ್ಕಡ ಇರುವುದರಿಂದ ಅಲ್ಲಿಗೆ ಹೊಗಲು ಕಷ್ಟವಾಗುತ್ತಾದೆ.ಅದಕ್ಕಾಗಿ ಕಣಿಯೂರು ಹೊಬಳಿ ಮಾಡುತ್ತೇವೆ ಎಂದು ಹೇಳಿದರು ಆದರೆ ಅದು ಇಲ್ಲಿ ತನಲ ಅಗಲಿಲ್ಲ. ಎಂದು ಹೇಳಿದರು.
ಶಾಸಕರೇ ನೀವು ಬೇರೆ ಕಡೆ ಸಮಸ್ಯೆಯಾದರೆ ನೀವು ಹೋಗುತ್ತೀರ ಆದರೆ ನಿಮ್ಮ ಹತ್ತಿರದಲ್ಲಿ ಶಿವಮೊಗ್ಗದಲ್ಲಿ ಬರ್ಬರ ಹತ್ಯೆಯಾದ ಮನೆಗೆ ನೀವು ಒಮ್ಮೆಯಾದರೂ ಭೇಟಿ ನೀಡಿದ್ದೀರ ಸೌಜನ್ಯಕಾದರೂ ಅವರ ಮನೆಗೆ ಭೇಟಿ ನೀಡಬಹುದಿತ್ತು. ಎಂದು ಹೇಳಿದರು.
ವಿವೇಚನದಿಂದ ಮತವನ್ನು ನೀಡಿ ಪದ್ಮರಾಜ್ ಆರ್ ಪೂಜಾರಿಗೆ ಮತವನ್ನು ನೀಡಿ ಎಂದು ಕೆ.ಕೆ ಸಮೀರ್ ಹೇಳಿದರು.ಬೆಳ್ತಂಗಡಿ ಅಲ್ಪಸಂಖ್ಯಾತರ ಅಧ್ಯಕ್ಷ ಕರೀಂ ಮಾತನಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಣ್ಣು ಮಕ್ಕಳಿಗೆ ಹೇಳಿದ ಮಾತನ್ನು ಅಲ್ಪಸಂಖ್ಯಾತದಿಂದ ನಾವು ಖಂಡಿಸುತ್ತೇವೆ, ಇನ್ನೂ ವಸಂತ ಬಂಗೇರ ಮತ್ತು ರಕ್ಷಿತ್ ಶಿವರಾಂ ಅಜ್ಜಿ ಪುಲ್ಲಿ ಎಂದು ಭಾಷಣದಲ್ಲಿ ಅತೀ ಕೀಳಾಗಿ ಮಾತನಾಡಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ ಇನ್ನೂ ಅಲ್ಪಸಂಖ್ಯಾತರ ಬಗ್ಗೆ ಏನಾದರೂ ಕೀಳಾಗಿ ಮಾತನಾಡಿದರೆ ನಾವು ಶಾಸಕರ ಮನೆಗೆ,ಕಛೇರಿಗೆ ಬಂದು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.ಇದೇ ರೀತಿ ಶಾಸಕರು ಇದ್ದಾರೆ 2028 ವಿಧಾನಸಭೆಯ ಚುನಾವಣೆ ಈಶ್ವರಪ್ಪ ಗತಿ ಬರುತ್ತದೆ ಎಂದು ಕರೀಂ ಹೇಳಿದರು.
ಈ ಸಂದರ್ಭದಲ್ಲಿ ಮಹಮ್ಮದ್ ಹನೀಫ್, ಅಜಯ್, ಜಾಡ್ಜ್, ಕೆ.ಮುಸ್ತಾಪ, ಉಮಾರಬ್ಬ ಮದಡ್ಕ, ಹಾಗೂ ವಿವಿಧ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.