ಎ.27,28: ಲಾಯಿಲ ಓಡದಕರಿಯ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

0

ಲಾಯಿಲ: ಲಾಯಿಲ ಓಡದಕರಿಯ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಎ.24 ಶನಿವಾರ ಮತ್ತು ಎ.28 ರವಿವಾರದಂದು ಎಸ್.ಗೋಪಾಲಕೃಷ್ಣ ಉಪಾಧ್ಯಾಯ, ಅಸ್ರಣ್ಣರು, ಕುತ್ರೊಟ್ಟು-ಇಂದಬೆಟ್ಟು ಇವರ ನೇತೃತ್ವದಲ್ಲಿ ಹಾಗೂ ವೇದಮೂರ್ತಿ ಶ್ರೀಕಾಂತ ಭಟ್ ಇವರ ಪೌರೋಹಿತ್ಯದಲ್ಲಿ ಜರಗಲಿರುವುದು.

ಎ.27ರಂದು ಶನಿವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ಪುಣ್ಯಾಹ, 12 ತೆಂಗಿನಕಾಯಿ ಗಣಹೋಮ, ತೋರಣ ಮುಹೂರ್ತ,ನಾಗ ಸಾನಿಧ್ಯದಲ್ಲಿ ತಂಬಿಲ,ಅಶ್ವಥ್ಥ ಪೂಜೆ,ನವಕ ಪ್ರಧಾನ ಹೋಮ ಹಾಗೂ ಕಲಶ ಅಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ರಾತ್ರಿ 7.00ರಿಂದ ಆಶ್ಲೇಷಾ ಬಲಿ, ನಿತ್ಯ ಪೂಜೆ.

ಎ.28ರಂದು ರವಿವಾರ ಚಂಡಿಕಾ ಹೋಮ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸಾನಿಧ್ಯದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಸಂಜೆ 6.30ರಿಂದ ಶ್ರೀ ಬಲಮುರಿ ಗಣಪತಿ ಭಜನಾ ಮಂಡಳಿ ಲಾಯಿಲ ಇವರಿಂದ ಕುಣಿತ ಭಜನಾ ಕಾರ್ಯಕ್ರಮ ಸಂಜೆ 7.30ರಿಂದ ಶ್ರೀ ರಂಗ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ರಾತ್ರಿ 9.00ರಿಂದ ಮೈಸಂದಾಯ , ಲೆಕ್ಕೆಸಿರಿ, ಜುಮಾದಿ ಬಂಟ ಹಾಗೂ ಅಣ್ಣಪ್ಪ ಪಂಜುರ್ಲಿ ದೈವಗಳಿಗೆ ನೇಮೋತ್ಸವ ನಡೆಯಲಿದೆ.

ಭಕ್ತ ಬಾಂಧವರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವರ್ಷಾವಧಿ ಜಾತ್ರಾ ಮಹೋತ್ಸವದ ಪುಣ್ಯ ಕೈಂಕರ್ಯದಲ್ಲಿ ಪಾಲ್ಗೊಂಡು ಅಮ್ಮನವರ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸ್ವಯಂ ಸೇವಕರು ಊರ ಹಾಗೂ ಪರವೂರ ಹತ್ತು ಸಮಸ್ತರು, ಲಾಯಿಲ ಓಡದಕರಿಯ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here