ಬೆಳ್ತಂಗಡಿ: ದ.ಕ ಲೋಕಸಭಾ ಚುನಾವಣೆಯಲ್ಲಿ ಕೆ.ಆರ್.ಎಸ್.ಪಕ್ಷ ರಂಜಿನಿ ಎಂ ಮಹಿಳಾ ಅಭ್ಯರ್ಥಿಯನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಲಿಸಿದೆ.
ಸೌಜನ್ಯ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕೆಂದು ಅಗ್ರಹಿಸಿ ಪಕ್ಷ ನಡೆಸಿದ ಬೆಳ್ತಂಗಡಿಯಿಂದ ಬೆಂಗಳೂರಿಗೆ ರಾಜ್ಯಾಧ್ಯಕ್ಷ ರವಿ ಕೃಷ್ಣ ರೆಡ್ಡಿ ನೇತೃತ್ವದಲ್ಲಿ ನಡೆಸಿದ ಪಾದಯಾತ್ರೆಯಲ್ಲಿ ಪಾಲ್ಗೊಂದಿದ್ದರು.
ಸೌಜನ್ಯ ಪರ ಹೋರಾಟಗಾರರು ನೋಟಾ ಮತ ನೀಡಲು ಕರೆ ನೀಡಿದ್ದು ಇದನ್ನು ಬದಲಾವಣೆ ಮಾಡಿ ಕೆ ಆರ್ ಎಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇ ಗೌಡ ಎಸ್.ಎಚ್ ಹೇಳಿದರು.
ಅವರು ಎ.16ರಂದು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಂಕೀರ್ಣದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ನಾಡಿನಲ್ಲಿ ಅನ್ಯಾಯ, ಅನಾಚಾರ ವ್ಯಾಪಕವಾಗಿದೆ, ಬರ ಪರಿಸ್ಥಿತಿಯಲ್ಲಿ ಜನರನ್ನು ಹೈರಳಾಗಿಸಿದೆ ಆದರೆ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ವಾಸ್ತವ ವಿಚಾರಗಳನ್ನು ಮರೆಮಾಚಿ ಮಣ್ಣೇರಚುವ ಕೆಲಸ ಮಾಡುತ್ತಿದ್ದಾರೆ. ಕೆ ಆರ್ ಎಸ್ ಪಕ್ಷ ಸತ್ಯ ಮತ್ತು ನ್ಯಾಯದ ಪರವಾಗಿ ನಿರಂತರ ನಿಲ್ಲುತ್ತಾ ಬಂದಿದೆ. ಪ್ರಸ್ತುತ ಲೋಕ ಸಭಾ ಚುನಾವಣೆಯಲ್ಲಿ ಸೋಲು ಗೆಲುವಿನ ನಡುವೆ ನ್ಯಾಯದ ಪರವಾಗಿ ಅಚಲವಾಗಿ ನಡೆಯುವ ದೃಢ ಸಂಕಲ್ಪ ಹೊಂದಿದ ಕೆ ಆರ್ ಎಸ್ ಪಕ್ಷವನ್ನು ಬೆಂಬಲಿಸಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ ಆರ್ ಎಸ್ ಪಕ್ಷದ ಅಭ್ಯರ್ಥಿ ರಂಜಿನಿ ಎಂ., ದ.ಕ.ಜಿಲ್ಲಾ ಅಧ್ಯಕ್ಷ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಸುನೀತಾ ರಿಜರಿಯೋ, ಕಾರ್ಯದರ್ಶಿ ಸಿಮಿ ಉಪಸ್ಥಿತರಿದ್ದರು.