ವೇಣೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ 2024 -25ನೇ ಸಾಲಿನ ವಾರ್ಷಿಕ ಮಹಾಸಭೆಯು ವೇಣೂರು ಬಾಹುಬಲಿ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು 2024 25ನೇ ಸಾಲಿನಲ್ಲಿ ರೂ.380 ಕೋಟಿ ವ್ಯವಹಾರ ನಡೆಸಿ ರೂ.1,86,50,423.61 ಲಾಭ ಗಳಿಸಿ ಶೇಕಡ 20% ಡಿವಿಡೆಂಟ್ ಘೋಷಿಸಲಾಯಿತು.
ಸಂಘದ ಉಪಾಧ್ಯಕ್ಷ ರತ್ನಾಕರ ಬಿ., ನಿರ್ದೇಶಕರಾದ ರಾಮದಾಸ್ ನಾಯಕ್, ಸಂದೀಪ್ ಹೆಗ್ಡೆ ಎಂ. ಆರ್. ಸಂತೋಷ, ನಾಗಪ್ಪ, ಆಶಾ, ರೋಹಿಣಿ, ಕೃಷ್ಣಪ್ಪ ಮೂಲ್ಯ, ಪ್ರಶಾಂತ್, ರಾಜು ನಾಯ್ಕ, ಪ್ರವೀಣ, ಜಿಲ್ಲಾ ಸಹಕಾರಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದಿನ್, ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯಂತ ಪೂಜಾರಿ ವರದಿ ವಾಚಿಸಿದರು.