


ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಎ.4ರಿಂದ 8ರ ವರೆಗೆ “ಪ್ರತಿಭಾ ಸಂಗಮ” ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ 2023-24ನೇ ಶೈಕ್ಷಣಿಕ ಅವಧಿಯಲ್ಲಿ ಶಾಲೆಯಲ್ಲಿ ವಿಶೇಷವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ತರಗಳಿಗಳಲ್ಲಿ ತೇರ್ಗಡೆ ಹೊಂದಿ ವಿವಿಧ ಸಾಂಸ್ಕೃತಿಕ ತರಗತಿಗಳಾದ ಸಂಗೀತ, ಭರತನಾಟ್ಯ, ಕರಾಟೆ ಹಾಗೂ ಯಕ್ಷಗಾನ ಅಭ್ಯಾಸ ನಡೆಸಿರುವ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ನೀಡಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲರಾದ ಮನ್ಮೋಹನ್ ನಾಯಕ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.









