

ಗುರುವಾಯನಕೆರೆ: ಕರ್ಟನ್ ಮತ್ತು ವಾಲ್ ಪೇಪರ್‌ಗೆ ಹೆಸರು ವಾಸಿಯಾಗಿರುವ ಸಂಸ್ಥೆ ನಿಸರ್ಗ ಕರ್ಟನ್ ಇದರ ಸಹಸಂಸ್ಥೆ ನಿಸರ್ಗ ಆರ್ಕೆಡ್‌ನ ಉದ್ಘಾಟನೆ ಮತ್ತು ನಿಸರ್ಗ ಮನೆಯ ಗೃಹಪ್ರವೇಶ ಫೆ.24ರಂದು ಕುವೆಟ್ಟು ಗ್ರಾಮ ಗುರುವಾಯನಕರೆಯ ಕೆರೆಯ ಮುಂಭಾಗದಲ್ಲಿ ಉದ್ಘಾಟನೆಗೊಳ್ಳಲಿದೆ.
ಗುರುವಾಯನಕೆರೆಯ ಮುಂಭಾಗದಲ್ಲಿ ನಿರ್ಮಿಸಿರುವ ಮೂರು ಅಂತಸ್ತಿನ ಕಟ್ಟಡಕ್ಕೆ ಉತ್ತಮ ವಿನ್ಯಾಸ ಮಾಡಲಾಗಿದೆ.ಮೊದಲ ಹಾಗೂ ಎರಡನೇ ಮಹಡಿಯಲ್ಲಿ ವಿವಿಧ ಉದ್ಯಮಕ್ಕೆ ಅನುಕೂಲವಾಗುವಂತೆ ಕಟ್ಟಡ ನಿರ್ಮಿಸಲಾಗಿದೆ.ಈಗಾಗಲೇ ಬಾಡಿಗೆಗೆ ಅಂಗಡಿ ಕೋಣೆಗಳ ಬುಕ್ಕಿಂಗ್ ಪೂರ್ಣಗೊಂಡಿದೆ.ಮೂರನೇ ಮಹಡಿಯಲ್ಲಿ ನಿಸರ್ಗ ಮನೆ ನಿರ್ಮಿಸಿದ್ದು ಮನೆಯು ವಾಸ್ತು ಹಾಗೂ ವಿವಿಧ ವಿನ್ಯಾಸದಿಂದ ಕೂಡಿದ್ದು ಗಮನ ಸೆಳೆಯಲಿದೆ.
ನಿಸರ್ಗ ಆರ್ಕೆಡ್‌ನ್ನು ಮಾಲಕರ ಮಾತೃಪಿತೃರಾದ ಗೋಪು ಸಾಲಿಯಾನ್ ಮತ್ತು ಸುಶೀಲ ಬರಾಯ ಉದ್ಘಾಟಿಸಲಿರುವರು.ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಬೆಳಿಗ್ಗೆ ವಾಣಿಜ್ಯ ಸಂಕೀರ್ಣ ಉದ್ಘಾಟನೆ ನಂತರ ಗೃಹಪ್ರವೇಶ, ಸತ್ಯನಾರಯಣ ಪೂಜೆ ಸಂಜೆ ಕುಣಿತ ಭಜನೆ ಹಾಗೂ ದುರ್ಗಾಪೂಜೆ ನೆರವೇರಲಿದೆ ಎಂದು ಕಟ್ಟಡದ ಮಾಲಕರಾದ ನಾಗೇಶ್ ಕೋಟ್ಯಾನ್ ಮತ್ತು ಸುಶೀಲ ಬರಾಯ ರವರು ತಿಳಿಸಿದ್ದಾರೆ.