ಗೇರುಕಟ್ಟೆ: ಕೊರಂಜ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಮುಂದಿನ ಮೂರು ವರ್ಷದ ಅವಧಿಗೆ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಮ್. ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಂದಿನ ಮೂರು ವರ್ಷದ ಅವಧಿಗೆ ವಿದ್ಯಾರ್ಥಿಗಳ ಅನುಪಾತದಂತೆ ಪರಿಶಿಷ್ಟ ಜಾತಿ/ಪಂಗಡ, ಅಲ್ಪಸಂಖ್ಯಾತ, ಮಹಿಳಾ ಮತ್ತು ಸಾಮಾನ್ಯ ಮೀಸಲಾತಿಯಂತೆ 18 ಜನ ಪೋಷಕ ಪ್ರತಿನಿಧಿಗಳನ್ನು ಪೋಷಕರು ಆಯ್ಕೆ ಮಾಡಿ, ಪೋಷಕ ಪ್ರತಿನಿಧಿಗಳ ಪೈಕಿ ಒಬ್ಬರು ಅಧ್ಯಕ್ಷರು, ಉಪಾದ್ಯಕ್ಷರು ಆಯ್ಕೆ ಮಾಡಬೇಕಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಹರೀಶ್ ಕುಮಾರ್ ಮತ್ತು ಸತೀಶ್ ಭಂಡಾರಿ ಇಬ್ಬರು ಆಕಾಂಕ್ಷಿಗಳು ಸ್ಪರ್ಧಿಸಿದ್ದರು.ಅದ್ಯಕ್ಷರ ಆಯ್ಕೆಯನ್ನು ಪೋಷಕ ಪ್ರತಿನಿಧಿಗಳು ಕೈ ಎತ್ತುವ ಮೂಲಕ ಆಯ್ಕೆ ಮಾಡಿದರು.ಹರೀಶ್ ಕುಮಾರ್ ರವರಿಗೆ 14 ಬೆಂಬಲಿತರು, ಸತೀಶ್ ಭಂಡಾರಿಯವರಿಗೆ 4 ಮಂದಿ ಬೆಂಬಲಿತರು ಕೈ ಎತ್ತಿ ಬಹುಮತದಂತೆ ಹರೀಶ್ ಕುಮಾರ್ ಆಯ್ಕೆಯಾದರು.ಉಪಾದ್ಯಕ್ಷರಾಗಿ ಮುನೀರಾ ಬಟ್ಟೆಮಾರು ಅವಿರೋಧ ಆಯ್ಕೆಯಾದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್, ಶ್ವೇತಾ, ನಾಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಜಿ, ಮಾಜಿ ಶಾಲಾಭಿವೃದ್ದಿ ಸಮಿತಿ ಸದಸ್ಯರು, ಪೋಷಕರು, ಶಾಲಾ ಶಿಕ್ಷಕರು ಹಾಜರಿದ್ದರು.
ಮುಖ್ಯೋಪಾದ್ಯಾಯರಾದ ಶಾಂತ ಎಸ್ ಶಾಲಾಭಿವೃದ್ದಿ ಸಮಿತಿಯ ರಚನಾ ನಡವಳಿಯನ್ನು ಸಭೆಗೆ ತಿಳಿಸಿದರು.ಶಿಕ್ಷಕ ಕೃಷ್ಣಪ್ರಸಾದ್ ಸ್ವಾಗತಿಸಿ, ದೈಹಿಕ ಶಿಕ್ಷಕ ರವಿರಾಜ್ ಕಾರ್ಯಕ್ರಮ ನಿರ್ವಹಿಸಿ, ಶಿಕ್ಷಕಿ ಅನುರಾಧ ಬಿ.ಸಿ.ವಂದಿಸಿದರು.