ಮಿತ್ತಬಾಗಿಲಿನಲ್ಲಿ ಒಂದೇ ಮನೆಯ ಇಬ್ಬರು ಸಹೋದರರು ವಿಧಿವಶ:ಅಣ್ಣನ ಸಾವಿನ ಬೆನ್ನಲ್ಲೇ ತಮ್ಮ‌ ನಿಧನ

0

ಮಿತ್ತಬಾಗಿಲು: ಇಲ್ಲಿನ ಕೆಳಗಿನ ಮನೆ ಎಂಬಲ್ಲಿ ಒಂದೇ ಮನೆಯ ಇಬ್ಬರು ಸಹೋದರರು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಜಾನು ಗೌಡ (70) ರವರು ಮಧ್ಯಾಹ್ನದ ವೇಳೆ ಸಾವನ್ನಪ್ಪಿದ್ದು, ಅವರ ಅಂತಿಮ‌ ವಿಧಿವಿಧಾನ ನಡೆಸುವ ವೇಳೆ ಅಸೌಖ್ಯದಿಂದ ಬಳಲುತ್ತಿದ್ದ ಕುಶಾಲಪ್ಪ ಗೌಡ(58)ರವರ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದು,ಉಜಿರೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದ್ರೂ ಅವರು ಬದುಕುಳಿಯಲಿಲ್ಲ.

ಈ ಮೂಲಕ ಅಣ್ಣನ ಸಾವಿನ ಕೆಲವೇ ಗಂಟೆಗಳ ಅಂತರದಲ್ಲಿ ತಮ್ಮ ವಿಧಿವಶರಾಗಿದ್ದಾರೆ.

ಈ ಘಟನೆಯಿಂದ ಮನೆಯವರು ತೀವ್ರ ಆಘಾತಕ್ಕೊಳಗಾಗಿದ್ದು, ಗ್ರಾಮದವರು ಕೂಡ ಅಪಾರ ದುಃಖದಲ್ಲಿದ್ದಾರೆ.

ಜಾನು ಗೌಡರವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗಿದ್ದು, ತಮ್ಮ ಕುಶಾಲಪ್ಪ ಗೌಡರವರ ಅಂತ್ಯ ಸಂಸ್ಕಾರ ನೇರವೇರಿಸಬೇಕಿದೆ.

p>

LEAVE A REPLY

Please enter your comment!
Please enter your name here