


ಬೆಳ್ತಂಗಡಿ: ಜೆಸಿಐ ಭವನದಲ್ಲಿ ಯೋಗದ ಮಹತ್ವ ಹಾಗೂ ಮಾಹಿತಿ ಕಾರ್ಯಾಗಾರ ಫೆ.5ರಂದು ನಡೆಯಿತು.
ಆರ್ಟ್ ಆಫ್ ಲಿವಿಂಗ್ ನ ಸದಸ್ಯ ಸುದೀಶ್ ಕುಮಾರ್ ನಿಡ್ಲೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಅಧ್ಯಕ್ಷ ರಂಜಿತ್ ಎಚ್. ಡಿ. ಬಳಂಜ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಸನ್ನ ಕುಮಾರ್, ಪೂರ್ವಧ್ಯಕ್ಷರುಗಳಾದ ಕಿರಣ್ ಕುಮಾರ್ ಶೆಟ್ಟಿ, ಅಭಿನಂದನ್ ಹರೀಶ್ ಕುಮಾರ್,ಪ್ರಶಾಂತ್ ಲಾಯಿಲ, ಸ್ವರೂಪ್ ಶೇಖರ್, ಉಪಾಧ್ಯಕ್ಷರುಗಳಾದ ಆಶಾ ಪ್ರಶಾಂತ್, ಚಂದ್ರಹಾಸ್, ಶೈಲೇಶ್,ಜೆಜೆಸಿ ಅಧ್ಯಕ್ಷ ಸಮನ್ವಿತ್, ಸದಸ್ಯರಾದ ಭರತ್, ರಶ್ಮಿ, ಅನನ್ಯ ಭಾಗವಹಿಸಿದರು.
ವೇದಿಕೆ ಅಹ್ವಾನವನ್ನು ಜೆಸಿ ವಿನಾಯಕ್ ಪ್ರಸಾದ್, ಜೆಸಿ ವಾಣಿಯನ್ನು ಜೆಸಿ ಭರತ್ ಹಾಗೂ ಕಾರ್ಯದರ್ಶಿ ಜೆಸಿ ಅನುದೀಪ್ ಜೈನ್ ಧನ್ಯವಾದ ನೀಡಿದರು.


            





