ಅನುಗ್ರಹ ಶಾಲೆಯಲ್ಲಿ ಯು.ಕೆ.ಜಿ ಮಕ್ಕಳ ಪದವಿ ಪ್ರದಾನ ಸಮಾರಂಭ

0

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಯು.ಕೆ.ಜಿ ಮಕ್ಕಳ ಪದವಿ ಪ್ರದಾನ ಸಮಾರಂಭವು ಶಾಲಾ ಸಂಚಾಲಕ ವಂ.ಫಾ.ಜೇಮ್ಸ್ ಡಿ’ಸೋಜಾರವರ ಆಧ್ಯಕ್ಷತೆಯಲ್ಲಿ ಶಾಲಾ ಸಭಾಭವನದಲ್ಲಿ ನಡೆಯಿತು.

ಪುಟಾಣಿಗಳ ಪ್ರಾರ್ಥನಾ ನೃತ್ಯದ ನಂತರ ಯು.ಕೆ.ಜಿ ಪುಟಾಣಿಗಳು ತಮ್ಮ ಮುಗ್ಧ ಮಾತಿನ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು.

ಪ್ರಾಂಶುಪಾಲ ವಂ.ಫಾ.ವಿಜಯ್ ಲೋಬೋ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ ಶಿಶು ಪಾಲನಾ ಕೇಂದ್ರವನ್ನು ತೆರೆದು ಅದರ ಪ್ರಗತಿಗೆ ಸಹಕಾರವನ್ನಿತ್ತ ಎಲ್ಲರನ್ನೂ ಅಭಿನಂದಿಸಿದರು.

ಮುಂದಕ್ಕೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವಂ.ಫಾ.ಜೇಮ್ಸ್ ಡಿ ಸೋಜಾರವರು ಬಹುಮಾನ ವಿತರಿಸಿದರು.ತದನಂತರ ಮುಖ್ಯ ಅತಿಥಿಗಳಾದ ಸೈಂಟ್ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಹಾಗೂ ಅನುಗ್ರಹ ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಅಶ್ವಿನಿ ಕೆ ರವರು ಮಕ್ಕಳಿಗೆ ಪದವಿ ಪ್ರದಾನ ಮಾಡಿ ಮಕ್ಕಳಿಗೆ ಶುಭ ಹಾರೈಸಿದರು.

ಮಕ್ಕಳಿಗೆ ಶುಭ ಹಾರೈಸುತ್ತಾ ಪದವಿ ಪ್ರದಾನ ಗೀತೆಯನ್ನು ಹಾಡಲಾಯಿತು.ಸಮಾರಂಭದ ಆಧ್ಯಕ್ಷರಾದ ವಂ.ಫಾ.ಜೇಮ್ಸ್ ಡಿ ಸೋಜಾರವರು ಆಧ್ಯಕ್ಷೀಯ ಭಾಷಣ ಮಾಡುತ್ತಾ ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮಕ್ಕಳಿಗೆ ಶುಭ ಕೋರಿದರು.ಕೊನೆಯಲ್ಲಿ ಮತ್ತೊಮ್ಮೆ ಯು.ಕೆ.ಜಿ ಪುಟಾಣಿಗಳು ಧನ್ಯವಾದವನ್ನಿತ್ತು ಕಾರ‍್ಯಕ್ರಮಕ್ಕೆ ಮೆರಗನ್ನು ನೀಡಿದರು.

ಕುಮಾರಿ ಅನುಷ್ಕಾ ನಿರೂಪಿಸಿದ ಕಾರ್ಯಕ್ರಮದ ನಂತರ ಪುಟಾಣಿ ಮಕ್ಕಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಅಂಟನಿ ಫೆರ್ನಾಂಡೀಸ್, ಶಿಕ್ಷಕ ರಕ್ಷದ ಸಂಘದ ಸದಸ್ಯ ಬೇಬಿ ಉಮೇಶ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here