ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್ ತಾಲೂಕಿನ ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಮಾದರಿಯಾಗಿದೆ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಒದಗಿಸಿದೆ ಎಂದು ಹೇಳಿದರು.
ಅವರು ಜ.25ರಂದು ಅರಳಿ ರೋಟರಿ ಸೇವಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಬೆಳ್ತಂಗಡಿ ರೋಟರಿ ಕ್ಲಬ್ ದಾನಿಗಳ ಆರ್ಥಿಕ ಸಹಕಾರದೊಂದಿಗೆ ಹಲವು ಶಾಲೆಗಳಿಗೆ ನೂತನ ಕಟ್ಟಡ ನಿರ್ಮಾಣಕ್ಕೆ, ಸಹಕಾರ ಆಸ್ಪತ್ರೆ ರೋಗಿಗಳಿಗೆ ಅನುಕೂಲವಾಗುವ ಡಯಾಲಿಸಿಸ್ ಯಂತ್ರ, ಇನ್ನು ಅನೇಕ ಸಮಾಜಕ್ಕೆ ಬೇಕಾದ ಉತ್ತಮ ಸೇವೆಗಳನ್ನು ನೀಡುತ್ತಾ ಬಂದಿದೆ ಎಂದರು.
ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ರೊ.ಅನಂತ ಭಟ್ ಮಚ್ಚಿಮಲೆ ಅವರು ಮಾತನಾಡಿ ಉಜಿರೆ ಹಳೆಪೇಟೆಯ ಸರ್ಕಾರಿ ಶಾಲೆಗೆ 25 ಲಕ್ಷ ನೀಡಲಾಗುತ್ತಿದ್ದು ಫೆ.4ರಂದು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೋ.ಬಿಕೆ ಧನಂಜಯ್ ರಾವ್, ಕಾರ್ಯದರ್ಶಿ ವಿದ್ಯಾಕುಮಾರ್ ಕಾಂಚೋಡು ಉಪಸ್ಥಿತರಿದ್ದರು.
p>