ಬೆಳ್ತಂಗಡಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ವಿಶೇಷ ತರಬೇತಿ ಕಾರ್ಯಾಗಾರ

0

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿ ಮಂಗಳೂರು., ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜ.19 ರಂದು ಬೆಳ್ತಂಗಡಿ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ವಿಶೇಷ ತರಬೇತಿ ಕಾರ್ಯಗಾರ ಎಸ್‌ಸಿಡಿಸಿಸಿ ಬ್ಯಾಂಕ್ ಲಿ., ಬೆಳ್ತಂಗಡಿ ಶಾಖೆಯ ಸಭಾಂಗಣದಲ್ಲಿ ನಡೆಯಿತು.

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾದ ಪದ್ಮನಾಭ ಅರ್ಕಜೆ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಹಕಾರಿ ಸಂಘ ಆಡಳಿತ ಮಂಡಳಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಒಂದು ನಾಣ್ಯದ ಎರಡು ಮುಖಗಳಂತೆ ಅವು ಸರಿಯಾಗಿ ಇದ್ದರೆ ಮಾತ್ರ ನಾಣ್ಯ ಚಲಾವಣೆಯಲ್ಲಿ ಇರುತ್ತದೆ , ಹಾಗೂ ಕ್ಷೀರ ಕ್ರಾಂತಿ ಸಹಕಾರ ರಂಗದಲ್ಲಿ ಒಂದು ವಿಭಿನ್ನವಾದುದು ಇದರ ಪಾಲನೆ ಪೋಷಣೆ ಹೈನುಗಾರರು ಮತ್ತು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕರ್ತವ್ಯ ಎಂದರು

ದ.ಕ ಸಹಕಾರಿ ಯೂನಿಯನ್ ನ ಆಧ್ಯಕ್ಷರಾದ ಶ್ರೀ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ರವರು ಮಾತನಾಡುತ್ತಾ ತರಬೇತಿಗಳನ್ನು ಪಡೆದುಕೊಳ್ಳುವುದರಿಂದಾಗಿ ಅರಿವಿನ ಜ್ಞಾನ ಗಳಿಸುವಂತಾಗುತ್ತದೆ. ರಾಜ್ಯದ ಸಹಕಾರ ರಂಗದಲ್ಲಿ ಹಾಲಿನ ಸಹಕಾರ ಸಂಘಗಳು ನಿಷ್ಠೆ ಮತಗ್ತು ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೆವೆ. ನೀವು ಇಲ್ಲಿ ಪಡೆದ ವಿಷಯಗಳನ್ನು ನಿಮ್ಮ ಸದಸ್ಯ ಹೈನುಗಾರರಿಗೆ ತಿಳಿಸಿ ಮತ್ತು ಹಾಲು ಉತ್ಪಾದನೆ ಇನ್ನು ಹೆಚ್ಚಾಗುವಂತೆ ಅವರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು

ಈ ತರಬೇತಿ ಶಿಬಿರದಲ್ಲಿ ದ.ಕ ಸಹಕಾರಿ ಯೂನಿಯನ್ ನಿ., ಮಂಗಳೂರು ಇದರ ನಿರ್ದೇಶಕಿ ಸಾವಿತ್ರಿ ರೈ, ಎಸ್‌ಸಿಡಿಸಿಸಿ ಬ್ಯಾಂಕ್ ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ಸುಧೀರ್ ಉಪಸ್ಥಿತರಿದ್ದರು.ಸಂಪನ್ಮೂಲ ವ್ಯಕ್ತಿಗಳಾಗಿ ತ್ರಿವೇಣಿ ರಾವ್ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪುತ್ತೂರು ಉಪವಿಭಾಗ ಇವರು ಸಹಕಾರ ಸಂಘಗಳ ಲೆಕ್ಕ ಪತ್ರ ನಿರ್ವಹಣೆ, ಲೆಕ್ಕಪರಿಶೋದನಾ ವರದಿ ಸಿದ್ದಪಡಿಸಲು ಅನುಸರಿಸಬೇಕಾದ ಕ್ರಮಗಳು ಹಾಗೂ ಸಭೆಗಳ ವಿಧಾನಗಳ ಬಗ್ಗೆ ಮಾಹಿಗಳನ್ನು ನೀಡಿದರು.

ಡಾ| ಡಿ.ಆರ್. ಸತೀಶ್ ರಾವ್ ಉಪವ್ಯವಸ್ಥಾಪಕರು(ಪುತ್ತೂರು ಉಪವಿಭಾಗ) ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಇವರು ಹಾಲಿನ ಗುಣಮಟ್ಟ, ಸಮರ್ಪಕವಾದ ಹಾಲು ಪರೀಕ್ಷೆ ಹಾಗೂ ಉತ್ತಮ ದರ ನೀಡುವ ಬಗ್ಗೆ ಹೈನುರಾಸುಗಳ ಆರೋಗ್ಯ ನಿರ್ವಹಣೆಯಲ್ಲಿ ಅನುಸರಿಸಬೇಕಾದ ಕ್ರಮಗಳು, ಹೆಣ್ಣು ಕರುಗಳ ಪಾಲನೆ ಪೋಷಣೆ ಮತ್ತು ಹೈನುರಾಸುಗಳಿಗೆ ಪಶು ಆಹಾರ ಮೇವಿನ ನಿರ್ವಹಣೆ ಬಗ್ಗೆ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ಸಾವಿತ್ರಿ ರೈ ಸ್ವಾಗತಿಸಿದರು , ಯೂನಿಯನ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ವಿ, ಹೀರೆಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here