ಜ.27 ರಿಂದ 29 ಸೌತಡ್ಕ ಗಣಪತಿ ಕ್ಷೇತ್ರದಲ್ಲಿ ನಾಗದೇವರ ಪುನಃಪ್ರತಿಷ್ಠೆ, ರಕ್ತೇಶ್ವರಿ ಪಂಜುರ್ಲಿ ದೈವಗಳ ಪ್ರತಿಷ್ಠೆ, ಅಷ್ಟೋತ್ತರ ಸಹಸ್ರನಾಳಿಕೇರ ಹೋಮ

0

ಬೆಳ್ತಂಗಡಿ: ಕೊಕ್ಕಡದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಜ.27ರಿಂದ 29 ರ ವರೆಗೆ ನಾಗದೇವರ ಪುನಃಪ್ರತಿಷ್ಠೆ, ನಾಗ ಪ್ರತಿಷ್ಠೆ, ರಕ್ತೇಶ್ವರಿ ಪಂಜುರ್ಲಿ ದೈವಗಳ ಪ್ರತಿಷ್ಠೆ, ಅಷ್ಟೋತ್ತರ ಸಹಸ್ರನಾಳಿಕೇರ ಶ್ರೀ ಮಹಾಗಣಪತಿ ಹೋಮ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಹೇಳಿದರು.

ಅವರು ಜ.23 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ತಾಯಂದಿರು ಮಕ್ಕಳಿಗೆ ಹಾಲುನಿಸುವ ನೂತನ ಕೊಠಡಿಯನ್ನು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಮಾಲರಬೀಡು ಉದ್ಘಾಟನೆ ಮಾಡಲಿದ್ದಾರೆ.ಉಜಿರೆ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಕ್ಷೇತ್ರ ಪರಿಚಯ ಪುಸ್ತಕ ಬಿಡುಗಡೆ ಮಾಡಲಿದ್ದಾರೆ ಎಂದರು.

ವ್ಯವಸ್ಥಾಪನಾ ಸಮಿತಿಯು 3 ವರ್ಷಗಳಲ್ಲಿ ಕೈಗೊಂಡ ವಿವಿಧ ಧಾರ್ಮಿಕ ಚಟುವಟಿಕೆಗಳು, ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಸಾಮಾಜಿಕ ಚಟುವಟಿಕೆಗಳು, ಕ್ಷೇತ್ರದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕಾರ್ಯಗಳ ವಿವರಗಳನ್ನು ನೀಡಿದರು.

ದೇವಸ್ಥಾನದ ಗೋಶಾಲೆಯನ್ನು ಅಭಿವೃದ್ಧಿ ಪಡಿಸಲು ದೇವಸ್ಥಾನದ ಸಮೀಪ ಇರುವ 10 ಎಕರೆ ಜಮೀನನ್ನು ಮಂಜೂರುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.ದಿನನಿತ್ಯ ಭಕ್ತರ ಸಂಖ್ಯೆ ಹೆಚ್ಚಾಗುತ್ತ ಬರುವುದರಿಂದ ಅನ್ನಛತ್ರದ ವಿಸ್ತರಣೆ, ಅಗತ್ಯ ಪಾತ್ರಗಳ ಖರೀದಿ, ಅಶ್ವತ್ಥಕಟ್ಟೆ, ಭಜನಾ ಮಂಟಪ ರಚನೆ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು.ಈ ಆರ್ಥಿಕ ವರ್ಷದಲ್ಲಿ ರೂ.10 ಕೋಟಿಗೂ ಅಧಿಕ ಆದಾಯ ಬಂದಿರುತ್ತದೆ.ಭಕ್ತರಿಗೆ ಅನುಕೂಲವಾಗುವಂತೆ ಸರಕಾರಿ ಬಸ್ ಕ್ಷೇತ್ರಕ್ಕೆ ಬರುವಂತೆ ವ್ಯವಸ್ಥೆಗೆ ಮನವಿ ನೀಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪುರಂದರ ಕಡೀರ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪ್ರಶಾಂತ್ ಪೂವಾಜೆ, ವಿಠಲ ಕುರ್ಲೆ, ನವೀನ್ ಕಟ್ಟೆ, ಯಶೋದ ಉಮೇಶ್, ಹೇಮಾವತಿ ಶಿವಾನಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here