ಅಳದಂಗಡಿ: ಬಿಕ್ಕಿರ ರಾಮ ನಗರ ನಾಮಕರಣ

0

ಅಳದಂಗಡಿ: ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯ ಶುಭ ಸಂದರ್ಭದಲ್ಲಿ ಬಡಗಕಾರಂದೂರು ಗ್ರಾಮದ ಬಿಕ್ಕಿರ ನಿವಾಸಿಗಳು ತಮ್ಮ ವಾಸಸ್ಥಳದ ಪರಿಸರವನ್ನು ರಾಮ ನಗರ ಎಂಬ ಹೆಸರಿನಿಂದ ಪರಿಚಯಿಸಿಕೊಂಡರು.

ಶ್ರೀ ರಾಮ ದೇವರ ಜಯಘೋಷದೊಂದಿಗೆ ಶ್ಯಾಮಸುಂದರ್ ಭಟ್ ರಾಮಜ್ಯೋತಿಯನ್ನು ಬೆಳಗಿಸಿ ರಾಮ ನಗರವೆಂಬ ಹೆಸರನ್ನು ಉದ್ಘೋಷಿಸಿ ದೀಪ ಪ್ರಜ್ವಲಿಸಿದರು.ಮತಗಳು ಸನಾತನಿಗಳ ಪಾವನ ಕ್ಷೇ ಮೋದಿಯವರಿಗೆ ಕೊಡುವ ಇನ್ನೊಂದು ಮತವು ಭಗವದ್ಭಕ್ತರಿಗೆ ಮಥುರೆಯನ್ನು ಒದಗಿಸಿ ಕೊಡುವಂತಾಗಲಿ ಎಂದು ಹಾರೈಸಿದರು.

ಇನ್ನೊಬ್ಬರು ಪ್ರತಿಭಾಶಾಲಿ ವಾಗ್ಮಿ ಜಗದೀಶ್ ರೈ ಹಾನಿಂಜೆಯವರು ಮಾತನಾಡಿ ಮೋದಿಜಿಯವರ ಸದೃಢ ನೇತೃತ್ವದಿಂದಾಗಿ ಅಯೋಧ್ಯೆಯಲ್ಲಿ ರಾಮಭಕ್ತರು ರಾಮ ಮಂದಿರ ನೋಡುವಂತಾಯ್ತು, ಪರಧರ್ಮೀಯರಿಗಿಂತಲೂ, ಜಾತ್ಯಾತೀತರೆಂಬ ಸೋಗಿನ ಸ್ವಧರ್ಮೀಯರಿಂದಲೇ ಸನಾತನ ಧರ್ಮದಮೇಲೆ ದಾಳಿಯಾಗುತ್ತಿರುವುದಾಗಿ ಖೇದ ವ್ಯಕ್ತಪಡಿಸಿದರು.ರಾಷ್ಟ್ರೋತ್ಥನದ ಸತ್ಕಾರ್ಯಕ್ಕಾಗಿ ಮುಂದಿನ ಚುನಾವಣೆಯಲ್ಲಿ ಮೋದಿಜಿಯವರ ಬೆಂಬಲಕ್ಕೆ ನಿಂತು ರಾಷ್ಟ್ರ ಸೇವೆಗಾಗಿ ಇನ್ನಷ್ಟು ಶಕ್ತಿ ತುಂಬಬೇಕೆಂದು ಕರೆ ನೀಡಿದರು.

ಶಶಿಧರ್ ಶೆಟ್ಟಿಯವರು 1992 ಡಿಸೆಂಬರ್ ನಲ್ಲಿ ಕರ ಸೇವಕರಾಗಿ ಹೋದ ರಾಮಭಕ್ತರ ಮೇಲಾದ ರಾಜಕೀಯ ಪ್ರೇರಿತ ದಾಳಿ, ಅನುಭವಿಸಿದ ಕಷ್ಟ ಕಾರ್ಪಣ್ಯಗಳನ್ನು ವಿವರಿಸುತ್ತಾ, ಅಲ್ಲಿ ಸ್ಥಳೀಯರು ತೋರಿದ ಔದಾರ್ಯ, ಪ್ರೀತಿ, ಸಹಕಾರವನ್ನು ನೆನಪಿಸಿಕೊಂಡರು.ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯ ಸಲುವಾಗಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದಲ್ಲಿ ಭಕ್ತಿಕಾರ್ಯಕ್ರಮ ಹಮ್ಮಿಕೊಳ್ಳಲು ಅನುವು ಮಾಡಿಕೊಟ್ಟು ಭಕ್ತಾದಿಗಳಿಗೆ ಭೋಜನ ವ್ಯವಸ್ಥೆಯನ್ನೂ ಕಲ್ಪಿಸಿದ ಅರಸರಾದ ಪದ್ಮಪ್ರಸಾದ ಅಜಿಲರನ್ನು ಕೃತಜ್ಞತಾ ಪೂರ್ವಕ ನೆನಪಿಸಿಕೊಂಡರು.

ಕುlತೃಷಾ ಆಚಾರ್ಯ ಮತ್ತು ಕುl ವೈಷ್ಣವಿ ಆಚಾರ್ಯರಿಂದ ಪ್ರಾರ್ಥನೆಯ ಬಳಿಕ ಚಿರಾಗ್ ಶೆಟ್ಟಿಯವರು ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು.ಮೋಹನ ದಾಸ್ ರವರು ಕಾರ್ಯಕ್ರಮ ನಿರೂಪಿಸಿದರು.ಪ್ರಶಾಂತ್ ಶೆಟ್ಟಿ, ಮೋಹನ್ ಕುಲಾಲ್(ನಿವೃತ್ತ ಯೋಧ), ಸದಾಶಿವ ಶೆಟ್ಟಿ, ಜನಪ್ರತಿನಿಧಿ ಕೃಷ್ಣಪ್ಪ ಬಿಕ್ಕಿರ, ಪ್ರತೀಕ್ ಶೆಟ್ಟಿ ನೊಚ್ಚ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ರೂವಾರಿಗಳಾಗಿ ಬಿಕ್ಕಿರ ರಾಮನಗರ ನಿವಾಸಿಗಳಾದ ಚಿರಾಗ್ ಶೆಟ್ಟಿ, ಪ್ರದೀಪ್ ಆಚಾರ್ಯ, ಪ್ರಕಾಶ್ ಆಚಾರ್ಯ, ಪ್ರಸಾದ್ , ಶರತ್, ಮನೋಜ್, ಹರೀಶ್ ಕುಲಾಲ್, ಸಂದೀಪ್, ರಕ್ಷಿತ್ ರವರು ಶ್ರಮಿಸಿದರು.ಸುಬ್ರಹ್ಮಣ್ಯ ಆಚಾರ್ಯ ಪಾಲಬೆ, ಲತೇಶ್ ದೇವಾಡಿಗ, ರಾಜು ಶೆಟ್ಟಿ ಹೊಸಮನೆ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಪೂರ್ಣೇಶ್ ಕಾಪಿನಡ್ಕ, ದೇವದಾಸ್ ಸಾಲ್ಯಾನ್, ವಾಸುದೇವ ಆಚಾರ್ಯ, ಪ್ರಭಾಕರ್ ಆಚಾರ್ಯ, ನವೀನ್ ಆಚಾರ್ಯ, ಯಶೋಧರ ಸುವರ್ಣ, ಸಹಿತ ಸಮಸ್ತ ಸ್ಥಳೀಯ ನಿವಾಸಿಗಳು ಹಾಜರಿದ್ದರು.ಪ್ರತೀಕ್ ಶೆಟ್ಟಿಯವರು ನೆರೆದ ಶ್ರೀರಾಮ ಭಕ್ತರಿಗೆ ಧನ್ಯವಾದ ಸಮರ್ಪಿಸಿದರು.ಉಪಹಾರದ ಹಂಚಿಕೆಯೊಂದಿಗೆ “ರಾಮ ನಗರ” ನಾಮನಿರ್ದೇಶನ ಕಾರ್ಯಕ್ರಮ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here