


ಬೆಳ್ತಂಗಡಿ: ಕರ್ನಾಟಕದ ರಬ್ಬರು ಬೆಳೆಗಾರರು ಇಂದು ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು ಸದ್ರಿ ಸಮಸ್ಯೆಗಳ ನಿವಾರಣೆಗೋಸ್ಕರ ರಬ್ಬರು ಬೆಳೆಗಾರರ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಕೊಡುವಂತೆ ಪುತ್ತೂರಿನ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕೃಷಿ ಅರ್ಥಶಾಸ್ತ್ರಜ್ಞ ಡಾ.ವಿಘ್ನಶ್ವರ ವರ್ಮುಡಿ ಅವರ ಬಳಿ ಕೇಳಿಕೊಂಡಿದ್ದು, ಅವರು ತಯಾರಿಸಿದ ವರದಿಯನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಮೂಲಕ ಅ.30ರಂದು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಯಿತು. ಸಂಸದರು ಈ ಬಗ್ಗೆ ಸಕಾರಾತ್ಮಕ ಸ್ಪಂದಿಸಿ ಸದ್ರಿ ವರದಿಯ ಪರಿಹಾರೋಪಾಯ ಕಾರ್ಯಗತವಾಗುವರೇ ಶ್ರಮಿಸುವುದಾಗಿ ತಿಳಿಸಿದರು.


ವರದಿ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಬ್ಬರು ಬೆಳೆಗಾರರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಶ್ರೀಧರ ಜಿ. ಭಿಡೆ, ಸಲಹೆಗಾರ ಅರ್ಥಶಾಸ್ತ್ರಜ್ಞ ಡಾ. ವಿಘ್ನಶ್ವರ ವರ್ಮುಡಿ, ಉಪಾಧ್ಯಕ್ಷ ನಿತ್ಯಾನಂದ ಮುಂಡೋಡಿ ಸುಳ್ಯ, ಪ್ರಸಾದ್ ಕೌಶಲ್ ಶೆಟ್ಟಿ ಪುತ್ತೂರು, ಗೋಪಾಲಕೃಷ್ಣ ಭಟ್ ಕೃಪಾ, ಸಂಯೋಜಕ ಅನಂತ ಭಟ್ ಎಂ. ಮುಂಡಾಜೆ ಹಾಗೂ ಕಾರ್ಯದರ್ಶಿ ರಾಜು ಶೆಟ್ಟಿ ಅವರು ಉಪಸ್ಥಿತರಿದ್ದರು.


            






