ಬೆಳ್ತಗಂಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಬೆಳ್ತಂಗಡಿಯ ಕೌಶಲ್ಯಭಿವೃದ್ಧಿ ತರಬೇತಿಯಡಿ ಯೋಜನೆಯ ಪಾಲುದಾರ ಬಂಧುಗಳಿಗೆ ಬಟ್ಟೆ ಚೀಲ ಮತ್ತು ಎಂಬ್ರಾಯಿಡರಿ ಐದು ದಿನಗಳ ನಡೆಯುವ ಉಚಿತ ತರಬೇತಿ ಕಾರ್ಯಗಾರವನ್ನು ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ್ ರವರು ಜ.೧೬ರಂದು ತಣ್ಣೀರುಪಂತ ವಲಯದ ಕುಪ್ಪೆಟ್ಟಿಯ ಬದ್ರಿಯಾ ಕಾಂಪ್ಲೆಕ್ಸ್ನಲ್ಲಿ ಉದ್ಘಾಟಿಸಿದರು.
ತಣ್ಣೀರುಪಂತ ವಲಯದ ಪ್ರಗತಿಬಂದು ಸ್ವ-ಸಹಾಯ ಸಂಘದ ವಲಯಾಧ್ಯಕ್ಷ ರಾಮಣ್ಣ ಗೌಡ ಅಧ್ಯಕ್ಷತೆ ವಹಿಸಿದ್ದರು.
ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ ಪೂಜಾರಿ, ಜನಜಾಗೃತಿ ವಲಯಾಧ್ಯಕ್ಷ ಪ್ರಭಾಕರ ಗೌಡ ಪೋಸಂದೋಡಿ ಹಾಗೂ ಟೈಲರಿಂಗ್ ಶಿಕ್ಷಕಿ ಉಷಾ ಉಪಸ್ಥಿತರಿದ್ದರು.
ತರಬೇತಿಯಲ್ಲಿ ಸ್ವ-ಉದ್ಯೋಗ ಮಾಡುವಲ್ಲಿ ಪ್ರೇರಣೆಯನ್ನು ಮತ್ತು ಉದ್ದೇಶದ ಬಗ್ಗೆ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಪ್ರಾಂಶುಪಾಲ ಸೋಮನಾಥ.ಕೆ ಮಾಹಿತಿ ನೀಡಿದರು.
ಸೇವಾಪ್ರತಿನಿಧಿ ಸಂದ್ಯಾ ಪ್ರಾರ್ಥಿಸಿದರು.ಮೇಲ್ವಿಚಾರಕಿ ವಿದ್ಯಾ ನಂದಕುಮಾರ್ ಸ್ವಾಗತಿಸಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಹರಿಣಿ ವಂದಿಸಿದರು.ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಉಪನ್ಯಾಸಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.