ಪಿಲ್ಯ: ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಸಲಾಯಿತು.ಪ್ರಥಮವಾಗಿ ಸಂಸ್ಥೆಯ ವತಿಯಿಂದ ಸ್ವಾಗತಿಸಲಾಯಿತು.
ಅಗ್ನಿ ಶಾಮಕದಳದ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಅಗ್ನಿದುರಂತಗಳ ಸಂಭವನೀಯ ಸ್ಥಿತಿ ಮತ್ತು ಮುನ್ನಚ್ಚರಿಕಾ ವಿಧಾನ, ಗ್ಯಾಸ್ ಲೀಕೇಜ್ ಕಾರಣ ವಹಿಸಬೇಕಾದ ಜಾಗ್ರತೆ, ಜಲದುರಂತ ಮೊದಲಾದ ಆಕಸ್ಮಿಕ ದುರಂತಗಳಿಂದ ನಾವು ಹೇಗೆ ಸುಲಭವಾಗಿ ಪಾರಾಗಬಹುದು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು.ಅಗ್ನಿ ನಂದಿಸುವ ಸುಲಭ ಪ್ರತ್ಯಕ್ಷಿಕೆ( ಪ್ರದರ್ಶನ) ನೀಡಿ ವಿದ್ಯಾರ್ಥಿಗಳಿಂದ ಮಾಡಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಕಾರ್ಯಾಗಾರದಲ್ಲಿ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.ಶಾಲಾ ಸಂಚಾಲಕರಾದ ನಸೀರ್ಅಹಮದ್ ಖಾನ್ ಉಪಸ್ತಿತರಿದ್ದರು.ಮುಖ್ಯ ಶಿಕ್ಷಕಿ ನಿರ್ಮಲ ಸ್ವಾಗತಿಸಿದರು.
p>