ಬೆಳ್ತಂಗಡಿ ತಾಲೂಕು 2ನೇ ಗಮಕ ಸಮ್ಮೇಳನ ಅಧ್ಯಕ್ಷರಾಗಿ ಜಯರಾಮ ಕುದ್ರೆತ್ತಾಯ ಧರ್ಮಸ್ಥಳ ಆಯ್ಕೆ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ 2ನೇ ಗಮಕ ಸಮ್ಮೇಳನವು ದಿನಾಂಕ 20 ದಶಂಬರ 2024 ಶನಿವಾರ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಜರಗಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಗಮಕಿ ಜಯರಾಮ ಕುದ್ರೆತ್ತಾಯ ಧರ್ಮಸ್ಥಳ ಇವರು ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿರುತ್ತಾರೆ ಎಂದು ಗಮಕ ಕಲಾ ಪರಿಷತ್ತಿನ ದ.ಕ.ಜಿಲ್ಲಾಧ್ಯಕ್ಷರಾದ ಮಧೂರು ಮೋಹನ ಕಲ್ಲೂರಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಬೆಳಾಲಿನಲ್ಲಿ ಜರಗಲಿರುವ ಗಮಕ ಸಮ್ಮೇಳನದ ತಯಾರಿಯು ಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ, ಡಿ.ಹರ್ಷೇಂದ್ರ ಕುಮಾರ್‌ರವರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರ ಪ್ರಧಾನ ಸಂಚಾಲಕತ್ವದಲ್ಲಿ, ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪ್ರೌಢಶಾಲೆಯ ಶಿಕ್ಷಕ ರಕ್ಷಕ ಸಂಘ, ಹಳೆ ವಿದ್ಯಾರ್ಥಿ ಸಂಘ ಇವರ ಸಹಯೋಗದಲ್ಲಿ, ಗ್ರಾಮ ಪಂಚಾಯತ್ ಬೆಳಾಲು, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿ. ಬೆಳಾಲು, ಶ್ರೀ ಮಾಯ ಮಹಾದೇವ ದೇವಸ್ಥಾನ, ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಕೊಲ್ಪಾಡಿ, ಶ್ರೀ ಅನಂತ ಪದ್ಮನಾಭ ದೇವಸ್ಥಾನ ಅನಂತೋಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ. ಬೆಳಾಲು ಇವರ ಸಹಕಾರದಲ್ಲಿ ಹಾಗೂ ಊರವರೆಲ್ಲರ ಕೂಡುವಿಕೆಯಿಂದ ಸಮ್ಮೇಳನದ ವ್ಯವಸ್ಥೆಗಳು ನಡೆಯಲಿದೆ ಎಂದು ಜಿಲ್ಲಾಧ್ಯಕ್ಷರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here