


ಬೆಳ್ತಂಗಡಿ: ಮೂಡಬಿದ್ರೆ ಕನ್ನಡ ಭವನದಲ್ಲಿ ಅ. 25ರಂದು ನಡೆದ ಶೋರಿನ್ ರ್ಯೂ ಕರಾಟೆ ಅಸೋಶಿಯೇಶನ್ ಇಂಡಿಯಾ ಮತ್ತು ಮೂಡಬಿದ್ರೆ ಎಂ.ಕೆ.ಅನಂತರಾಜ್ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ನಡೆದ 8ನೇ ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಜ್ಞಾನ್ ಪ್ರಥಮ ಸ್ಥಾನ ಪಡೆದು ಸ್ವರ್ಣ ಪದಕವನ್ನು ಪಡೆದಿರುತ್ತಾರೆ.


ಬಂದಾರು ಗ್ರಾಮದ ಬೈಪಾಡಿ ದಿ. ಹರೀಶ್ ಪೂಜಾರಿ ಮತ್ತು ಪ್ರೀತಿ ದಂಪತಿಯ ಪುತ್ರ. ಪ್ರಶಸ್ತಿ ವಿಜೇತ ವಿದ್ಯಾರ್ಥಿಯನ್ನು ಕಾಲೇಜಿನ ಆಡಳಿತ ಸಮಿತಿಯ ಅಧ್ಯಕ್ಷೆ ಪ್ರೀತಿತಾ ಧರ್ಮವಿಜೇತ್, ಟ್ರಸ್ಟಿ ಬಿನುತಾ ಬಂಗೇರ ಹಾಗೂ ಟ್ರಸ್ಟಿಗಳು ಅಭಿನಂದಿಸಿದ್ದಾರೆ.
ಕರಾಟೆ ಶಿಕ್ಷಕ ರಹಿಮಾನ್, ನಿವೃತ್ತ ಶಿಕ್ಷಕ ಸುರೇಶ್, ಕಾಲೇಜಿನ ಉಪನ್ಯಾಸಕ ರಾಕೇಶ್ ಕುಮಾರ್, ಶೇಕ್ ರಶೀದ್ ಉಪಸ್ಥಿತರಿದ್ದರು.










