ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾಗಿ ವಿಠಲ ನಾಯ್ಕ

0

ಉಜಿರೆ: ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ 48ನೇ ವಾರ್ಷಿಕ ಮಹಾಸಭೆಯು ಡಿ.11ರಂದು ಭಜನಾ ಮಂಡಳಿಯ ಅಧ್ಯಕ್ಷರ ವಿಠಲ ನಾಯ್ಕ ಇವರ ಅಧ್ಯಕ್ಷತೆಯಲ್ಲಿ, ದೇವಸ್ಥಾನದ ಮೊಕ್ತೇಸರ ವಾಸುದೇವ ಸಂಪಿಗೆತ್ತಾಯ ಇವರ ಗೌರವ ಉಪಸ್ಥಿತಿಯಲ್ಲಿ, ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಗೌರವಾಧ್ಯಕ್ಷರಾಗಿ ವಾಸುದೇವ ಸಂಪಿಗೆತ್ತಾಯರನ್ನು ಹಿಂದಿನ ಸಂಪ್ರದಾಯದಂತೆ ಮುಂದುವರಿಸಲಾಯಿತು.ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ವಿಠಲ ನಾಯ್ಕ‌ ಕಕ್ಕರಬೆಟ್ಟು, ಉಪಾಧ್ಯಕ್ಷರಾಗಿ ಶ್ರೀಧರ ಶೆಟ್ಟಿ ಕಿರಿಯಾಡಿ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ದೊಂಪದಪಲ್ಕೆ, ಜೊತೆ ಕಾರ್ಯದರ್ಶಿಯಾಗಿ ಶೈಲೇಶ್ ಧರಣಿ, ಕೋಶಾಧಿಕಾರಿಯಾಗಿ ರಮೇಶ್ ಗೌಡ, ಕಿರಿಯಾಡಿ ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಭಗೀರಥ, ದೊಂಪದಪಲ್ಕೆ, ಸೀತಾರಾಮ ಗೌಡ ಕೂಡಿಗೆ, ರಾಜೇಶ್ವರಿ ಚಂದ್ರಕಾಂತ್ ಕಕ್ಕರಬೆಟ್ಟು, ನಾರಾಯಣ ಪೂಜಾರಿ ಭೀಮಗುಡ್ಡೆ,‌‌ ಕೃಷ್ಣಪ್ಪ ಗೌಡ ಬರೆಮೇಲು, ಕೃಷ್ಣಪ್ಪ ನಾಯ್ಕ, ದೇವಿಕೃಪಾ ಪೆರಾಲ್ದಪಲ್ಕೆ ಕೃಷ್ಣಪ್ರಸಾದ್, ಮೂಡಾಯಿಬೆಟ್ಟು ಶೀನಪ್ಪ ಗೌಡ ಅಲೆಕ್ಕಿ ಕಿರಿಯಾಡಿ, ಶ್ರೀಧರ ಬಂಗೇರ ಕಕ್ಕರಬೆಟ್ಟು, ಚಂದ್ರಶೇಖರ ಪೂಜಾರಿ ನಿನ್ನಿಕಲ್ಲು, ಸದಾನಂದ ಪಂಚಳಿಕೆ, ತಾರನಾಥ ಕಕ್ಕರಬೆಟ್ಟು, ಯಾದವ ಕುಲಾಲ್, ಗಾಂಧಿನಗರ, ಮೋಕ್ಷಿತ್, ಕಿರಿಯಾಡಿ, ಗೌತಮ್ ಪೆರಾಲ್ದಪಲ್ಕೆ, ಸುಜಿತ್ ಪಂಚಳಿಕೆ, ಪವನ್ ನಿನ್ನಿಕಲ್ಲು, ಗೌರವ ಸಲಹೆಗಾರರಾಗಿ ರುಕ್ಮಯ್ಯ ಗೌಡ, ಕೊಡಂಗೆ ಧರ್ಣಪ್ಪ ಗೌಡ, ಧರಣಿ ಕೊರಗಪ್ಪ ಗೌಡ, ಕಕ್ಕರಬೆಟ್ಟು ಚಂದ್ರಕಾಂತ ಗೌಡ, ಕಕ್ಕರಬೆಟ್ಟು ಕೆ.ಬಾಬು ಗೌಡ ಪಾದೆ, ಕಕ್ಕರಬೆಟ್ಟು ಇವರಲ್ಲೆರನ್ನು ಸರ್ವಾನುಮತದಿಂದ ಆರಿಸಲಾಯಿತು.

ಭಗೀರಥ ಸ್ವಾಗತಿಸಿ, ಕೃಷ್ಣಪ್ರಸಾದ್ ಧನ್ಯವಾದವಿತ್ತರು, ರಮೇಶ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here