ನೇರೊಳಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ, ಅಂಗನವಾಡಿ ಕಾರ್ಯಕರ್ತೆಗೆ ಸನ್ಮಾನ

0

ಕನ್ಯಾಡಿ I: ಕನ್ಯಾಡಿ I ಗ್ರಾಮದ ನೇರೊಳಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಮತ್ತು ಅಂಗನವಾಡಿ ಕಾರ್ಯಕರ್ತೆಗೆ ಸನ್ಮಾನ ಕಾರ್ಯಕ್ರಮ ಡಿ.16 ರಂದು ಜರುಗಿತು.

ನೇರೊಳಪಲ್ಕೆ ಅಂಗನವಾಡಿ ಕೇಂದ್ರದಿಂದ ಕನ್ಯಾಡಿ I ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆಯಾಗಿರುವ ವಿನುತಾ ರವರನ್ನು ಬಾಲವಿಕಾಸ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷೆ ತುಳಸಿ ವಹಿಸಿದ್ದರು.ನಡ ಗ್ರಾ.ಪಂ.ಅಧ್ಯಕ್ಷೆ ಮಂಜುಳ ಸಭೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಪ್ರವೀಣ್‌, ಜಯ ಶೆಟ್ಟಿ, ಶಶಿಕಲಾ ಜೈನ್, ನಡ ಗ್ರಾ.ಪಂ. ಕಾರ್ಯದರ್ಶಿ ಕಿರಣ್‌ ಎಂ, ನವೀನ್ ಶೆಟ್ಟಿ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here