ಕುಕ್ಕೇಡಿ-ನಿಟ್ಟಡೆ: ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಗುರುಜಯಂತಿ

0

ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಮಿತಿ ಕುಂಡದಬೆಟ್ಟು, ಕುಕ್ಕೇಡಿ-ನಿಟ್ಟಡೆ ಯುವ ಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ವೇದಿಕೆ ಹಾಗೂ ಯುವವಾಹಿನಿ ಸಂಚಲನ ಸಮಿತಿ ಕುಂಡದಬೆಟ್ಟು, ಕುಕ್ಕೇಡಿ-ನಿಟ್ಟಡೆ ಇವುಗಳ ಜಂಟಿ ಆಶ್ರಯದಲ್ಲಿ ಯೋಗೀಶ್ ಶಾಂತಿ ಸೊರಗೆದಡಿ ಇವರ ಪೌರೋಹಿತ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಗುರುಜಯಂತಿ, ಸತ್ಯನಾರಾಯಣ ದೇವರ ಪೂಜೆ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಡಿ.3ರಂದು ಸಂಘದ ನಿವೇಶನ ಗೋಳಿಯಂಗಡಿಯಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಕುಳಾಯಿ ಪೌಂಡೇಶನ್ ಮಂಗಳೂರು ಇದರ ಅಧ್ಯಕ್ಷೆ ಪ್ರತಿಭಾ ಕುಳಾಯಿ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ, ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ನಗರದ ಅಧ್ಯಕ್ಷ ಸತೀಶ್ ಕೆ., ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಕೆ., ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಜಯವಿಕ್ರಮ ಕಲ್ಲಾಪು, ತಾಲೂಕು ಮಹಿಳಾ ಬಿಲ್ಲವ ವೇದಿಕೆಯ ಕಾರ್ಯದರ್ಶಿ ಶಾಂಭವಿ ಪಿ. ಬಂಗೇರ, ತಾಲೂಕು ಸಂಘದ ನಿರ್ದೇಶಕ ರಮೇಶ್ ಪೂಜಾರಿ ಪಡ್ಡಾಯಿ ಮಜಲು, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಪುಷ್ಪಾ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷರಾದ ಧನುಷ್, ಯುವವಾಹಿನಿ ಸಂಚಲನ ಸಮಿತಿ ಅಧ್ಯಕ್ಷರಾದ ಅಶ್ವಥ್ ಉಪಸ್ಥಿತರಿದ್ದರು.

ಸನ್ಮಾನ: ಪ್ರಗತಿಪರ ಹೈನುಗಾರರಾದ ಪುಷ್ಪಾ ಕೋಟೆಮನೆ, ನಾಟಿ ವೈದ್ಯರಾದ ಚೆಲುವಮ್ಮ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವರದರಾಜ ಬರಮೇಲು, ನೂತನ ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ, ನಗರದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ನೂತನ ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅನಿತಾ ಕೆ., ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ಮಾಲತಿ ಮುಂಡೂರು, ನಿರ್ಗಮನ ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ ಹೇಡ್ಮೆ ಇವರನ್ನು ಸನ್ಮಾನಿಸಲಾಯಿತು.

ಕುಮಾರಿ ತೇಜಸ್ವಿನಿ, ಕುಮಾರಿ ದಿಶಾ ಮತ್ತು ಕುಮಾರಿ ಶೃತಿಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಬಂದಂತಹ ಅತಿಥಿಗಳನ್ನು ತಾಲೂಕು ಯುವ ಬಿಲ್ಲವ ವೇದಿಕೆಯ ಅಧ್ಯಕ್ಷರಾದ ನಿತೀಶ್ ಎಚ್. ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು, ರಾಜೇಂದ್ರ ಕೆ. ವರದಿ ವಾಚಿಸಿದರು. ಸಂಘದ ಮುಂದಿನ ನೂತನ ಅಧ್ಯಕ್ಷರುಗಳಾಗಿ ಪುರುಷೋತ್ತಮ ಪೂಜಾರಿ ಮಂಗಳತೇರು, ಶ್ರೀಮತಿ ಹರಿಣಾಕ್ಷಿ ಪಾಲ್ದ್ರೋಡಿ, ನವೀನ್ ಅಮೈ, ಸಂತೋಷ್ ಹಚ್ಚೇವು ಅಧಿಕಾರ ವಹಿಸಿಕೊಂಡರು.ಕುಮಾರಿ ಕೃತಿಕಾರವರು ಕಾರ್ಯಕ್ರಮ ನಿರೂಪಿಸಿದದರು. ಕಾರ್ಯಕ್ರಮದ ಕೊನೆಯಲ್ಲಿ ಸಂದೇಶ್ ಬೋರ್ಡೆಲ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here