ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಮಹಾಸಭೆಯು ಬೆಳ್ತಂಗಡಿ ಹಳೆಕೋಟೆ ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ನ.5 ರಂದು ಜರುಗಿತು.
ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷರಾದ ಪಿ.ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ ಸಭೆಯ ಅಮಂತ್ರಣ ಪತ್ರಿಕೆಯನ್ನು ಸಭೆಯಲ್ಲಿ ವಾಚಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ಸಂಘದ ವಾರ್ಷಿಕ ಮಂಜೂರಾತಿ ವರದಿಯನ್ನು ಸಭೆಯಲ್ಲಿ ಓದಿದರು.
2022-23 ನೇ ಸಾಲಿನ ಲೆಕ್ಕ ಪತ್ರವನ್ನು ಸಂಘದ ಕೋಶಾಧಿಕಾರಿ ಬಾಲಕೃಷ್ಣ ಗೌಡ ಬಿರ್ಮೋಟ್ಟು ಸಭೆಯಲ್ಲಿ ಮಂಡಿಸಿದರು.
ಬೈಲ ತಿದ್ದುಪಡಿ ಮಂಜೂರಾತಿ ಪತ್ರದ ವಿವರಗಳನ್ನು ಸಂಘದ ನಿರ್ದೇಶರಾದ ಯುವರಾಜ್ ಗೌಡ ಅನಾರು ಸಭೆಯಲ್ಲಿ ಮಂಡಿಸಿದರು.
ಮುಂದಿನ ವರ್ಷದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಸ್ತಾವನೆಯನ್ನು ಸಂಘದ ಗೌರವಾಧ್ಯಕ್ಷರಾದ ಪದ್ಮಗೌಡ ಬೆಳಾಲು ಸದಸ್ಯರೊಂದಿಗೆ ಸಭೆಯಲ್ಲಿ ಚರ್ಚಿಸಿದರು.
ಸ್ಪಂದನ ಸೇವಾ ಸಂಘದ ವತಿಯಿಂದ ಸಮಾಜ ಭಾಂದವರಿಗೆ ಆರ್ಥಿಕ ಸಂಕಷ್ಟದಲಿರುವ, ವಿಧ್ಯಾಭ್ಯಾಸ ಮತ್ತು ಅನಾರೋಗ್ಯ ಸಮಸ್ಯೆಗ ಕುಟುಂಬಕ್ಕೆ ಕಳೆದ ಮೂರು ವರ್ಷಗಳಿಂದ ಆರ್ಥಿಕ ಸಹಾಯ ಧನ ವಿತರಣೆ ಮಾಡುತ್ತಿದೆ ಎಂದು ಸಂಘದ ಸಂಘಟಕರು ತಿಳಿಸಿದರು.
ಸಂಘದ ನೂತನ ಕಟ್ಟಡ ರಚನೆಗೆ ಹಿರಿಯರಾದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ರಾದ ಸೋಮೇ ಗೌಡ ಜಿ 1ಲಕ್ಷ ವಾಗ್ದಾನ ಮಾಡಿ ಮೊದಲ ಕಂತು ರೂ 25 ಸಾವಿರದ ಚೆಕ್ ನೀಡಿದರು.
ಉಜಿರೆ ಪ್ರಕಾಶ್ ಗೌಡ ಅಪ್ರಮೆ ರೂ.50 ಸಾವಿರ ಸಭೆಯಲ್ಲಿ ವಾಗ್ದಾನ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಕೃಷ್ಣಪ್ಪ ಗೌಡ ಸವಣಾಲು, ಉಷಾದೇವಿ ಬಿ.ಬೆಳಾಲು, ವಿಜಯ ಕುಮಾರ್ ನ್ಯಾಯತರ್ಪು, ಧರ್ಣಪ್ಪ ಗೌಡ ಬಂದಾರು, ಕೆ.ಆರ್.ಸುಭ್ರಮಣ್ಯ ಗೌಡ ಬಾರ್ಯ, ಹರೀಶ್ ಗೌಡ ಬಂದಾರು, ರವೀಂದ್ರ ಗೌಡ ಪೆರ್ಮುದೆ, ವಾಣಿ ಸೌಹಾರ್ದ ಕೋ.ಸೊಸೈಟಿ ಪ್ರವರ್ತಕರಾದ ಗೋಪಾಲ ಗೌಡ ವಕೀಲರು ಉಜಿರೆ ಹಾಗೂ ಬೆಳ್ತಂಗಡಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ ಕೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಕೀಲರ ಸಂಘದ ಅಧ್ಯಕ್ಷ ವಸಂತ ಗೌಡ ಮರಕ್ಕಡ ಹಾಗೂ ಕಾರ್ಯದರ್ಶಿ ನವೀನ್ ಬಿ.ಕೆ.ಯವರನ್ನು ಸಂಘದ ವತಿಯಿಂದ ಗೌರವಿಸಿದರು.
ಕು.ಜಯಶ್ರೀ, ಕು.ಸಿಂಚನ, ಕು.ಅಭಿಜ್ಞಾ ಪ್ರಾರ್ಥನೆ ಮಾಡಿದರು.ಸಂಘದ ಜತೆ ಕಾರ್ಯದರ್ಶಿ ಶೀನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಸ್ವಾಗತಿಸಿದರು.
ಕಾರ್ಯಕ್ರಮ ನಿರೂಪಣೆ ವಾಣಿ ಕಾಲೇಜು ಉಪನ್ಯಾಸಕ ಮಹಾಬಲ ಗೌಡ, ಕೊಯ್ಯುೂರು ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲರಾದ ಮೋಹನ ಗೌಡ ಕೊಯ್ಯೂರು ನಿರ್ವಹಣೆ ಮಾಡಿದರು.ವಾಣಿ ಸೌಹರ್ದ ಕೋ.ಆಪರೇಟಿವ್ ಪ್ರವರ್ತಕ ಗೋಪಾಲಕೃಷ್ಣ ವಕೀಲರು ಧನ್ಯವಾದವಿತ್ತರು.