ಬೆಳ್ತಂಗಡಿ: ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

0

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಉಜಿರೆ ಶ್ರೀ ಧ. ಮಂ. ಪದವಿ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಭೋಜಮ್ಮ ಕೆ.ಎನ್. ಆಗಮಿಸಿ ದೀಪ ಬೆಳಗಿಸಿ ಮಾತನಾಡಿದ ಅತಿಥಿಗಳು ಕನ್ನಡ ಭಾಷೆಯ ಮಹತ್ವ ಹಾಗೂ ಕನ್ನಡ ಉಳಿವಿಗಾಗಿ ಮುಂದಿನ ಯುವ ಪೀಳಿಗೆ ಸಂಸ್ಕೃತಿ, ಸಂಸ್ಕಾರಗಳಿಗೆ,
ಪ್ರಾಧ್ಯಾನತೆ ಕೊಡಬೇಕು ಎಂಬುದನ್ನು ತಿಳಿಸಿದರು.

ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಎಂ. ಆರ್. ಉಪಸ್ಥಿತರಿದ್ದರು. ಮಕ್ಕಳಿಗೆ ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಿಸಿದಂತೆ, ಸಾಂಸ್ಕೃತಿಕ ಕಾರ್ಯಕ್ರಮ ಗಾದೆ ಮಾತುಗಳು ಸುಂದರ ಕೈಬರಹ, ಒಗಟುಗಳು, ಪದ್ಯ ರಚನೆ, ನೃತ್ಯ, ರಸಪ್ರಶ್ನೆ, ಗುಂಪು ಗೀತ ಗಾಯನ, ಭಾಷಣ ಸ್ಪರ್ಧೆ ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮದ ಸ್ವಾಗತವನ್ನು ಅಂಜಲಿ ಆರನೇ ತರಗತಿ, ಅತಿಥಿ ಪರಿಚಯವನ್ನು ಲಾಸ್ಯ ಎಂಟನೇ ತರಗತಿ, ಅನಘ ಮರಾಠೆ 10ನೇ ತರಗತಿ ನಿರೂಪಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶಿಕ್ಷಕರಾದ ಸೌಮ್ಯ ಪಿ., ನೀತಾ ಕೆ.ಎಸ್., ಶ್ರೇಯಾಂಸ ಜೈನ್, ಸಹನಾ, ಅಮಿತಾ ಪ್ರವೀಣ್ ಎನ್. ಅವರ ನೇತೃತ್ವದಲ್ಲಿ ಎಲ್ಲಾ ಶಿಕ್ಷಕ / ಶಿಕ್ಷಕಿಯರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಗೊಂಡಿತು. ದಿಶಾ ಪಿ. ಶೆಟ್ಟಿ 8ನೇ ತರಗತಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here