ಗುರುವಾಯನಕೆರೆ: ಎಕ್ಸೆಲ್ ನಲ್ಲಿ ಕನ್ನಡ ರಾಜ್ಯೋತ್ಸವ

0

ಗುರುವಾಯನಕೆರೆ: ಸಾಹಿತ್ಯ, ಸಂಸ್ಕೃತಿ, ವ್ಯಾಪಾರ ವ್ಯವಹಾರ ಎಲ್ಲದರಲ್ಲೂ ಕನ್ನಡಿಗರು ಜಗತ್ತಿನಲ್ಲೇ ಅನನ್ಯ ಸಾಧನೆ ಮಾಡಿದ್ದಾರೆ ಎಂದು ವಿಶ್ರಾಂತ ಮುಖ್ಯೋಪಾಧ್ಯಾಯ, ಎಕ್ಸೆಲ್ ವಿದ್ಯಾ ಸಂಸ್ಥೆಗಳ ಕ್ಯಾಂಪಸ್ ಮನೇಜರ್ ಶಾಂತಿರಾಜ್ ಜೈನ್ ಹೇಳಿದರು.

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಕನ್ನಡಿಗರ ಶೌರ್ಯ, ಸಾಹಸ ಮೆಚ್ಚಿಕೊಳ್ಳುವಂತೆ, ಔದಾರ್ಯ, ಸಜ್ಜನಿಕೆಗಳನ್ನು ಕೂಡಾ ನಾವು ಕೊಂಡಾಡ ಬೇಕಿದೆ ಎಂದವರು ಹೇಳಿದರು.

ವಿದ್ಯಾರ್ಥಿನಿಯರು ನಾಡು-ನುಡಿ ಹಿರಿಮೆ ಬಣ್ಣಿಸುವ ಹಾಡುಗಳನ್ನು ಹಾಡಿದರು.

ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಎಕ್ಸೆಲ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಉಪಸ್ಥಿತರಿದ್ದರು.ಕನ್ನಡ ವಿಭಾಗದ ಮುಖ್ಯಸ್ಥರಾದ ಜಯರಾಂ ಸ್ವಾಗತಿಸಿ, ಉಪನ್ಯಾಸಕಿ ದಿಶಾ ಸಿ ಜೆ ವಂದಿಸಿದರು. ಉಪನ್ಯಾಸಕ ರಂಜಿತ್ ನಿರೂಪಿಸಿದರು.

LEAVE A REPLY

Please enter your comment!
Please enter your name here