ಶಿಬಾಜೆ: ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ, ಮತ್ತು ಮನೆ ಮನೆ ಜಾಥಾ ಅಭಿಯಾನದಡಿ ವಿಶೇಷ ಗ್ರಾಮ ಸಭೆ ಮತ್ತು ಮನೆ ಮನೆ ಭೇಟಿ

0

ಶಿಬಾಜೆ: ಶಿಬಾಜೆ ಗ್ರಾ.ಪಂನಲ್ಲಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ, ಮತ್ತು ಮನೆ ಮನೆ ಜಾಥಾ ಅಭಿಯಾನದಡಿ ವಿಶೇಷ ಗ್ರಾಮ ಸಭೆ ಮತ್ತು ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ವೇಳೆ ಕರಪತ್ರ ವಿತರಿಸಿ, ಮಾಹಿತಿ ನೀಡಲಾಯಿತು.

ಉದ್ಯೋಗ ಖಾತರಿ ಯೋಜನೆಯ ತಾಲೂಕು ಸಂಯೋಜಕರಾದ ವಿನಿಷ ಆಗಮಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ನಂತರ ಮಕ್ಕಳ ಗ್ರಾಮ ಸಭೆ ನಡೆಯಿತು.ಮಕ್ಕಳು ತಮ್ಮ ಬೇಡಿಕೆಯನ್ನಿತ್ತರು.ಶಾಲಾ ಮಕ್ಕಳಿಗೆ ಅಂಗನವಾಡಿ ಮೇಲ್ವಿಚಾರಕರಾದ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷ ದಿನಕರ್ ಎಮ್.ಜೆ ಮತ್ತು ಸದಸ್ಯರಾದ ರತೀಶ್, ವಿನಯಚಂದ್ರ, ವನೀತಾ ವಿ.ಶೆಟ್ಟಿಗಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಜ್, ಗ್ರಾ.ಪಂ ಸಿಬ್ಬಂದಿಗಳು, ಸಮುದಾಯ ಆರೋಗ್ಯ ಅಧಿಕಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here