ನಾಳ: ಶರವನ್ನರಾತ್ರಿ ಪೂಜೆ ಮತ್ತು ಭಜನೋತ್ಸವ

0

ನ್ಯಾಯತರ್ಪು: ನಾಳ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಅ.15ರಿಂದ ಪ್ರಾರಂಭಗೊಂಡು ಅ.25ರವರೆಗೆ ನವರಾತ್ರಿ ಪೂಜೆ, ಪ್ರತಿದಿನ ಅನ್ನಸಂತರ್ಪಣೆ ವಿವಿಧ ಭಜನಾ ಮಂಡಳಿಗಳಿಂದ ಭಜನೋತ್ಸವ ನಡೆಯಲಿದೆ.

ಅ.22ರಂದು ಸುದರ್ಶನ್ ಭಟ್ ಕುಂಟಿನಿ ಭಜನಾ ಸೇವಾರ್ಥವಾಗಿ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ರಕ್ತೇಶ್ವರಿ ಪದವು, ಶ್ರಿ ರಾಮ ಭಜನಾ ಮಂಡಳಿ ಪಾಡಿಗಾರ ಪೆರ್ಡೂರು ಭಜನಾ ತಂಡದಿಂದ ಚೆಂಡೆ ವಾದನ ನೃತ್ಯ ನಡೆಯಿತು.

ದೇವಳದ ಬ್ರಹ್ಮಶ್ರೀ ಬಾಲಕೃಷ್ಣ ಪಂಗಣ್ಣಾಯರವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣರ ನೇತೃದಲಲಿ ವೈದಿಕ ವಿಧಿವಿಧಾನಗಳೊಂದಿಗೆ ವನರಾತ್ರಿ ಪೂಜ, ಭಜನೋತ್ಸವ ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ನಾಳ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಅಭಿವೃದ್ಧಿ ಸಮಿತಿ, ಭಜನಾ ಮಂಡಳಿ, ಶ್ರೀ ದುರ್ಗಾ ಮಾತೃ ಮಂಡಳಿ ಮತ್ತು ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

ಅ.23ರಂದು ಆಯುಧಪೂಜೆ, ಮಂತ್ರಾಕ್ಷತೆ ಭಜನಾ ಸೇವಾಕರ್ತರು ವಸಂತ ಮಜಲು ಮತ್ತು ಕುಟುಂಬಸ್ಥರು, ರಾತ್ರಿ 7ಕ್ಕೆ ಶ್ರೀ ಬಾಲವಿಕಾಸ ಭಜನಾ ಮಂಡಳಿ ಕುಲಾಯಿ, ಹೊಸಬೆಟ್ಟು ಭಜನಾ ತಂಡದಿಂದ ವಿಶೇಷ ಕುಣಿತ ಭಜನೆ ನಡೆಯಲಿದೆ.

p>

LEAVE A REPLY

Please enter your comment!
Please enter your name here