ಉಜಿರೆ ಸಂತ ಅಂತೋನಿ ಚರ್ಚ್ ನಿತ್ಯಾಧರ್ ವಾಳೆಯ ವಾರ್ಷಿಕ ಹಬ್ಬ- ಸಾಧಕರಿಗೆ ಸನ್ಮಾನ

0

ಉಜಿರೆ: ಉಜಿರೆ ಸಂತ ಅಂತೋನಿ ಚರ್ಚ್ ನಿತ್ಯಾಧರ್ ವಾಳೆಯ ವಾರ್ಷಿಕ ಹಬ್ಬ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಅ.22ರಂದು ಹಲಕ್ಕೆ ರಿಚರ್ಡ್ ಡಿಕುನ್ನ ರವರ ಮನೆಯ ವಠಾರದಲ್ಲಿ ಜರಗಿತು.

ಉಜಿರೆ ಸಂತ ಅಂತೋನಿ ಚರ್ಚ್ ಧರ್ಮಗುರು ವ.ಫಾ.ಜೇಮ್ಸ್ ಡಿಸೋಜಾ, ಅನುಗ್ರಹ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವ.ವಿಜಯ್ ಲೋಬೊ, ಧರ್ಮ ಭಗಿನಿ ಸಿ| ವಲ್ಸ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಸಮುದಾಯ ಸಂಚಾಲಕ ರೋಷನ್ ಡಿಸೋಜಾ, ಆಯೋಗದ ಸಂಚಾಲಕಿ ಲವೀನಾ ಫೆರ್ನಾಂಡಿಸ್, ಉಪಸ್ಥಿತರಿದ್ದು ಶುಭ ಕೋರಿದರು.

ಈ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ವೆರಿನ ರೊಡ್ರಿಗಸ್, ಕ್ಲಿಂಟಾನ್ ಡಿಸೋಜಾ, ಸುದ್ದಿ ಬಿಡುಗಡೆಯಲ್ಲಿ 24ವರ್ಷ ಸೇವೆ ಸಲ್ಲಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪತ್ರಕರ್ತ ಹೆರಾಲ್ಡ್ ಪಿಂಟೊ, ಭೂಸೇನೆಯಲ್ಲಿ ಸುಬೇದಾರ್ ಹುದ್ದೆಯಲ್ಲಿ ನಿವೃತ್ತ ಹೊಂದಿರುವ ಮೆಲ್ವಿನ್ ಫೆರ್ನಾಂಡಿಸ್, ಉಜಿರೆ ಎಸ್.ಎ.ಮೆಡಿಕಲ್ಸ್ ಮಾಲಕ ವೈದ್ಯಕೀಯ ಸೇವೆಯಲ್ಲಿ ನೀಡಿದ ಸಾಧನೆಗೆ ಪ್ರಕಾಶ್ ಫೆರ್ನಾಂಡಿಸ್, ನಿವೃತ ಗುರಿಕಾರ ಹಾಗೂ ಸಮಾಜ ಸೇವಕ ಹಳ್ಳಿ ಮನೆ ಪ್ರವೀಣ್ ಫೆರ್ನಾಂಡಿಸ್, ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಎಸ್ ಎಸ್ ಎಲ್ ಸಿ ಟೀನಾ ಮೆಮೋರಿಯಲ್ ಚಿನ್ನದ ಪುರಸ್ಕೃತ ವಿನಿಶಾ ಸಿಕ್ವೇರಾ, ವಿಲೋನ ಡಿಕುನ್ನ, ಶಾನ್ ಡಿಸೋಜಾ, ವೈವಾಹಿಕ ಜೀವನದ ಬೆಳ್ಳಿ ಹಬ್ಬ ಆಚರಿಸಿದ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕ ವಲೇರಿಯನ್ ಡಿಸೋಜಾ ಮತ್ತು ಪ್ಲೋರಿನ್ ಡಿಸೋಜಾ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಅತೀ ಹೆಚ್ಚು ಅಂಕ ಗಳಿಸಿದ ಹಾಗೂ ಅನುಗ್ರಹ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಹೇಝಲ್ ಜಿಶಾ ಪಿಂಟೊ ಮೈಸೂರು ಡಿವಿಷನ್ ಮಟ್ಟದಲ್ಲಿ ಫುಟ್ಬಾಲ್ ನಲ್ಲಿ ಚಿನ್ನದ ಪದಕ ಪುರಸ್ಕೃತೆ, ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಗೌರವಿಸಲಾಯಿತು.

ವಾಳೆಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.ಗುರಿಕಾರ ವಲೇರಿಯನ್ ಪಿಂಟೊ ಸ್ವಾಗತಿಸಿ, ಲವೀನಾ ಫೆರ್ನಾಂಡಿಸ್ ವಂದಿಸಿದರು, ಸೆಲಿನ್ ವೇಗಸ್, ಜ್ಯೋತಿ ಪಿಂಟೊ, ಜಯ ಡಿಸೋಜಾ,ಲವೀನಾ ಫೆರ್ನಾಂಡಿಸ್ ಸನ್ಮಾನಿತರ ಪರಿಚಯ ಮಾಡಿದರು. ಶರೋನ್ ಪಿಂಟೊ ಮತ್ತು ವಿನೀತ್ ಸಿಕ್ವೇರಾ ನಿರೂಪಿಸಿದರು.

LEAVE A REPLY

Please enter your comment!
Please enter your name here