ಲಯನ್ಸ್ ಕ್ಲಬ್ ವತಿಯಿಂದ ಈದ್ ಸೌಹಾರ್ದ ಸಂದೇಶ ಕಾರ್ಯಕ್ರಮ: ಭಾರತ ಸೌಹಾರ್ದತೆಯ ಸುಂದರ ಹೂದೋಟ: ಝಮೀರ್ ಸ‌ಅದಿ

0

ಬೆಳ್ತಂಗಡಿ: ಬಹುವಿಧ ಸಂಸ್ಕೃತಿಯ ಭಾರತ ದೇಶದಲ್ಲಿ ಎಲ್ಲಾ ಜಾತಿ ಧರ್ಮ ಪಂಥದ ಜನರು ಸೌಹಾರ್ದತೆಯಿಂದ ಬದುಕುತ್ತಿರುವುದು ಅದ್ಭುತ ಸಂಗತಿ. ಭಾರತ ಎಂಬುದು ಸುಂದರಬಹೂದೋಟ ಎಂದು ಧರ್ಮಗುರು ಝಮೀರ್ ‌ಸ‌ಅದಿ ವಲ್ ಫಾಝಿಲ್ ಹೇಳಿದರು.

ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಮುಸ್ಲಿಂ ಧರ್ಮದ ಈದ್ ಹಬ್ಬವನ್ನು ಸೌಹಾರ್ದತೆಯ ಸಂಕೇತವಾಗಿ ಆಚರಿಸಲಾಗಿ ಪ್ರಧಾನ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು. ಲಯನ್ಸ್ ಕ್ಲಬ್ ಸೇವೆಯೊಂದಿಗೆ ಪ್ರತಿಭಾ ಕೌಶಲ ಉದ್ದೀಪನಕ್ಕೂ ವೇದಿಕೆಯಾಗಿದೆ. ನಾನೂ ಕೂಡ ಚಿಕ್ಕವನಿರುವಾಗ ಲಯನ್ಸ್ ನ ಸ್ಪರ್ಧೆಗಳಲ್ಲಿ‌ ಭಾಗವಹಿಸಿ‌ ಬಹುಮಾನ ಪಡೆದ‌ ನೆನಪು ಇಂದಿಗೂ‌ ಸ್ಪೂರ್ತಿದಾಯಕ ಎಂದು ನೆನಪಿಸಿಕೊಂಡರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಲಯನ್ಸ್ ಕ್ಲಬ್ ಸುವರ್ಣ ಸಂಭ್ರಮ ವರ್ಷದ ಅಧ್ಯಕ್ಷ ಉಮೇಶ್ ಶೆಟ್ಟಿ ಮಾತನಾಡಿ, ನಮ್ಮ ಕ್ಲಬ್ ಗೆ ಜಾತಿ ಧರ್ಮದ ಭೇದವಿಲ್ಲ. ನಮ್ಮಲ್ಲಿ ಈದ್,‌ ಕ್ರಿಸ್ಮಸ್, ದೀಪಾವಳಿ ಎಲ್ಲಾ ಆಚರಣೆಗಳನ್ನೂ ಅವರವರ ಸಂಪ್ರದಾಯಬದ್ಧವಾಗಿ ನಡೆಸಲಾಗುತ್ತದೆ ಎಂದರು.

ಕಾರ್ಯಕ್ರಮ ಸಂಯೋಜಕ ಅಶ್ರಫ್ ಆಲಿಕುಂಞಿ ಮುಂಡಾಜೆ ಅತಿಥಿಗಳನ್ನು ಪರಿಚಯಿಸಿದರು. ವಿಕಲಚೇತನೆಯಾದರೂ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಚತಾಗಾರ್ತಿಯಾಗಿ ಸ್ವಾಭಿಮಾನದಿಂದ ಸೇವೆ ಸಲ್ಲಿಸುತ್ತಿರುವ ಶಾರದಾ ಅವರನ್ನು ಗಾಂಧಿ ಜಯಂತಿಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ನಿಕಟಪೂರ್ವ ಅಧ್ಯಕ್ಷ ಡಾ. ದೇವಿ ಪ್ರಸಾದ್ ಬೊಳ್ಮ ಉಪಸ್ಥಿತರಿದ್ದರು.ಬಳೆಂಜ ರವೀಂದ್ರ ಶೆಟ್ಟಿ ಪ್ರಾರ್ಥನೆ ಹಾಡಿದರು.ಜಗನ್ನಾಥ ಶೆಟ್ಟಿ ಧ್ವಜವಂದನೆ ನಡೆಸಿದರು.ಕಾರ್ಯದರ್ಶಿ ಅನಂತಕೃಷ್ಣ ವರದಿ ವಾಚಿಸಿದರು.

ಈದ್ ಪ್ರಯುಕ್ತ ಇಬ್ಬರು ಅರ್ಹ ಮುಸ್ಲಿಂ ಕುಟುಂಬಕ್ಕೆ ಸುಶೀಲಾ ಹೆಗ್ಡೆ ಅವರ ಪ್ರಾಯೋಜಕತ್ವದಲ್ಲಿ ಅಕ್ಕಿ ವಿತರಿಸಲಾಯಿತು.ಸನ್ಮಾನಿತರನ್ನು ನಿತ್ಯಾನಂದ ನಾವರ ಪರಿಚಯಿಸಿದರು.ಅಮೇರಿಕಾ ಪದರವಾಸ ಕೈಗೊಳ್ಳಲಿರುವ ಲಯನ್ಸ್ ಕ್ಲಬ್ ಸದಸ್ಯ ಲಕ್ಷ್ಮಣ ಪೂಜಾರಿ ಅವರನ್ನು ಬೀಳ್ಕೊಡಲಾಯಿತು. ಲಾಂಗೂಕ ಚಾಲಕ ರಾಮಕೃಷ್ಣ ಗೌಡ ತನ್ನ ಕಲಾಪ ನಿರ್ವಹಿಸಿದರು.

ಕೋಶಾಧಿಕಾರಿ ಶುಭಾಷಿಣಿ ವಂದಿಸಿದರು. ಈದ್ ಪ್ರಯುಕ್ತ ಅತ್ತರ್ ಸುಗಂಧ ದ್ರವ್ಯ ಹಾಕಿ ಎಲ್ಲರನ್ನೂ ಬರಮಾಡಿಕೊಳ್ಳಲಾಯಿತು.ಉಮೇಶ್ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಖರ್ಜೂರ, ಮತ್ತು ಫಲೂದ ಪಾನೀಯ ವ್ಯವಸ್ಥೆ ಹಾಗೂ ಈದ್ ಉಪಾಹಾರ ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here