ಬೆಳ್ತಂಗಡಿ ಧರ್ಮಪ್ರಾಂತ್ಯ ಉದನೆ ವಲಯ ಮಕ್ಕಳ ಪ್ರತಿಭೋತ್ಸವ ನೆಲ್ಯಾಡಿ ಅಲ್ಫೋನ್ಸ ಸಂಡೆ ಸ್ಕೂಲ್ ಗೆ ಸಮಗ್ರ ಪ್ರಶಸ್ತಿ

0

ಬೆಳ್ತಂಗಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ವಾರ್ಷಿಕ ಮಕ್ಕಳ ಪ್ರತಿಭಾ ಸಂಘಮದ ಅಂಗವಾಗಿ ಆ.15 ರಂದು ಅಡ್ಡಹೊಳೆಯಲ್ಲಿ ನಡೆದ ಮಕ್ಕಳ ಪ್ರತಿಭಾ ಸ್ಪರ್ಧೆಗಳಲ್ಲಿ ನೆಲ್ಯಾಡಿ ಅಲ್ಫೋನ್ಸ ಸಂಡೆ ಸ್ಕೂಲ್ ಸಮಗ್ರ ಪ್ರಶಸ್ತಿಗೆ ಅರ್ಹವಾಗಿದೆ.

ಬೈಬಲ್ ರಸ ಪ್ರಶ್ನೆಯಲ್ಲಿ ಪ್ರಥಮ ಸ್ಥಾನವನ್ನು ನೆಲ್ಯಾಡಿಯ ಅಲ್ವಿನ್, ಡೆಲ್ವಿನ್ ಅಲೆಕ್ಸ್, ಒಳಗೊಂಡ ತಂಡವು ಅಕ್ಷನ್ ಸೊಂಗ್ ವಿಭಾಗದಲ್ಲಿ ಆಶ್ಲೀನ್, ಸಾನ್ ಮೇರಿ, ಜ್ಯುವೆಲ್ ಮರಿಯಾ, ಜಿಯಾ, ಅಲ್ಫೋನ್ಸ, ಮಿಯಾ ರೋಸ್, ಅಲೋನ ಜೇಮ್ಸ್, ಎಲಿಸಬೇತ್ ತಂಡ ದ್ವಿತೀಯ ಸ್ಥಾನವನ್ನು ನೃತ್ಯದಲ್ಲಿ ಪ್ರಥಮ ಸ್ಥಾನವನ್ನು ಜಿಯಾ, ಛದ್ಮವೇಷದಲ್ಲಿ ಮಿಯಾ ರೋಸ್ ದ್ವಿತೀಯ ಸ್ಥಾನವನ್ನು, ಅಲ್ವಿನ್ ಅಬ್ರಹಾಂ ತೃತೀಯ ಸ್ಥಾನವನ್ನು ಪಡೆದು ಸಮಗ್ರ ಪ್ರಶಸ್ತಿಗೆ ಅರ್ಹವಾಯಿತು.

ವಂದನಿಯ ಸಿಸ್ಟೆರ್ ಬ್ಲೆಸಿ ಮರಿಯಾ ಬಿಂದು ಟೈಟಸ್, ಟೆಸಿ, ಕ್ರಿಸ್ಟೀನಾ, ಪ್ರಿನ್ಸಿ ಹಾಗೂ ಮುಖ್ಯೋಪಾಧ್ಯಾಯರಾದ ರೊಯ್, ಇತರ ಶಿಕ್ಷಕರು ಹಾಗೂ ಮಕ್ಕಳಿಗೆ ಉತ್ತಮ ಬೆಂಬಲವನ್ನು ನೀಡಿದ ಪೋಷಕರನ್ನು ಧರ್ಮ ಗುರುಗಳಾದ ವಂದನಿಯ ಶಾಜಿ ಮಾತ್ಯು ಈ ಸಂದರ್ಭದಲ್ಲಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here